ಫೆ.18: ಸಂವಿಧಾನ ಜಾಗೃತಿ ಜಾಥಾ ಪ್ರಯುಕ್ತ ಕ್ರಿಕೆಟ್ ಪಂದ್ಯಾಟ, ಬೈಕ್ ರ್ಯಾಲಿ
Update: 2024-02-17 21:56 IST
ಉಡುಪಿ, ಫೆ.17: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ ನಗರಸಭೆ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ಫೆ.18ರ ಬೆಳಗ್ಗೆ 7 ಗಂಟೆಗೆ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಿಂದ ಬೀಡಿನಗುಡ್ಡೆ ಮೈದಾನದವರೆಗೆ ಬೈಕ್ ರ್ಯಾಲಿ ನಡೆಯಲಿದ್ದು, ಅನಂತರ ವಿವಿಧ ತಂಡಗಳ ನಡುವೆ ಕ್ರಿಕೆಟ್ ಪಂದ್ಯಾಟಗಳು ನಡೆಯಲಿವೆ.
ಕ್ರಿಕೆಟ್ ಪಂದ್ಯಾಟದಲ್ಲಿ ಡಿಸಿ ಇಲೆವೆನ್, ಸಿಇಓ ಇಲೆವೆನ್, ಎಸ್ಪಿ ಇಲೆವೆನ್, ಫಾರೆಸ್ಟರ್ ಇಲೆವೆನ್, ವಕೀಲರ ತಂಡ, ಪ್ರೆಸ್ ಇಲೆವೆನ್, ಪೌರ ಕಾರ್ಮಿಕರ ಇಲೆವೆನ್ ಹಾಗೂ ಎಕ್ಸೈಸ್ ಇಲೆವೆನ್‌ಗಳು ಭಾಗವಹಿಸಲಿವೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.