ಆ.2: ’ಕಾ ಪುರುಷ್ ಓ ಮಹಾಪುರುಷ್’ ಕೃತಿ ಬಿಡುಗಡೆ
Update: 2026-07-28 20:19 IST
ಉಡುಪಿ, ಜು.28: ಕಲ್ಕೂರ ಪ್ರತಿಷ್ಠಾನ ಪ್ರಕಾಶನದಿಂದ ಮುದ್ರಣಗೊಂಡಿ ರುವ ಹಿರಿಯ ಸಾಹಿತಿ ಎಚ್.ಶಾಂತರಾಜ ಐತಾಳ್ ಅವರ 22 ನೇ ಕೃತಿ ’ಕಾ ಪುರುಷ್ ಓ ಮಹಾಪುರುಷ್’ ಬಿಡುಗಡೆ ಸಮಾರಂಭವು ಆ.2ರಂದು ಸಂಜೆ 4-30 ಕ್ಕೆ ಉಡುಪಿ ಅಜ್ಜರಕಾಡಿನ ಗೋವಿಂದ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ನಮ್ಮ ದೇಶ ಕಂಡ ಸಾಧಕರನೇಕಾರ ಪೈಕಿ ಸುಮಾರು 79ಮಂದಿ ಮಹತ್ಸಾದಕರನ್ನು ಓದುಗರಿಗೆ ಪರಿಚಯಿಸುವ ಪ್ರಯತ್ನ ಈ ಕೃತಿಯ ಮೂಲಕ ಮಾಡಲಾಗಿದ್ದು, ಕೋಟೇಶ್ವರದ ’ಸ್ಥಿತಿಗತಿ’ ಪತ್ರಿಕೆಯ ಸಂಪಾದಕ ಡಾ.ಎನ್.ಭಾಸ್ಕರ ಆಚಾರ್ಯ ಕೃತಿ ಬಿಡುಗಡೆ ಮಾಡಲಿರುವರು ಎಂದು ಪ್ರಕಟಣೆ ತಿಳಿಸಿದೆ.