ಜೂ.25, 26ರಂದು ವಾರಣಾಸಿ ಎನ್‌ಎಸ್‌ಡಿ ತಂಡದಿಂದ ‘ಏಕಲವ್ಯ’ ಯಕ್ಷಗಾನ
ಉಡುಪಿ, ಜೂ.24: ಅದಮಾರು ಮಠದ ಆಶ್ರಯದಲ್ಲಿ ಗುರು ಬನ್ನಂಜೆ ಸಂಜೀವ ಸುವರ್ಣರು ವಾರಣಾಸಿಯ ಎನ್‌ಎಸ್‌ಡಿ ವಿದ್ಯಾರ್ಥಿಗಳಿಗೆ ನೀಡುತಿದ್ದ ಹಿಂದಿಯಲ್ಲಿ ಯಕ್ಷಗಾನ ತರಬೇತಿ ಮುಕ್ತಾಯಗೊಂಡಿದ್ದು, ಅವರೀಗ ಉಡುಪಿಯಲ್ಲಿ ಎರಡು ಪ್ರದರ್ಶನ ನೀಡಲು ಸಿದ್ಧರಾಗಿದ್ದಾರೆ.
ಉಡುಪಿಯಲ್ಲಿ ಅವರು ‘ಏಕಲವ್ಯ’ ಯಕ್ಷಗಾನ ಪ್ರಸಂಗದ ಎರಡು ಪ್ರದರ್ಶನಗಳನ್ನು ಜೂ.25 ಮತ್ತು 26ರಂದು ನೀಡಲಿ ದ್ದಾರೆ. ಜೂ.25ರಂದು ಸಂಜೆ 5:30ಕ್ಕೆ ಪೂರ್ಣಪ್ರಜ್ಞ ಕಾಲೇಜಿನ ಅಡಿಟೋರಿಯಂನಲ್ಲಿ ಮೊದಲ ಪ್ರದರ್ಶನ ನೀಡಲಿದ್ದು, ಜೂ.26ರಂದು ಸಂಜೆ 6:00ಗಂಟೆಗೆ ಎರಡನೇ ಪ್ರದರ್ಶನವನ್ನು ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ನೀಡಲಿದ್ದಾರೆ.
ಭಾಗವತ ಹೊಸ್ತೋಟು ಮಂಜುನಾಥ ಭಾಗವತ ಬರೆದ ಏಕಲವ್ಯ ಪ್ರಸಂಗ ವನ್ನು ಪ್ರಭಾತ್ ಪಾಟೀಲ್ ಹಾಗೂ ಶೋಭಾ ಆರ್.ತಂತ್ರಿ ಅವರು ಹಿಂದಿಗೆ ಅನುವಾದಿಸಿದ್ದಾರೆ. ಗುರು ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದಲ್ಲಿ ರಾಷ್ಟ್ರೀಯ ಸ್ಕೂಲ್ ಆಫ್ ಡ್ರಾಮಾದ ವಾರಣಾಸಿ ಕೇಂದ್ರದ ವಿದ್ಯಾರ್ಥಿಗಳು ಇದನ್ನು ಆಡಿ ತೋರಿಸಲಿದ್ದಾರೆ ಎಂದು ಎಂದು ಆಯೋಜಕರು ತಿಳಿಸಿದ್ದಾರೆ.