×
Ad

ದ್ವಿತೀಯ ಪಿಯು ಫಲಿತಾಂಶ: ಆರೋಗ್ಯ ಸಮಸ್ಯೆಗಳನ್ನು ಮೆಟ್ಟಿನಿಂತ ಸಾನ್ವಿ ರಾವ್

Update: 2024-04-11 10:12 IST

ಉಡುಪಿ, ಎ.11: ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಕಾರ್ಕಳ ತಾಲೂಕು ಹಿರ್ಗಾನದ ಕ್ರಿಯೇಟಿವ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಸಾನ್ವಿ ರಾವ್ ವಾಣಿಜ್ಯ ವಿಭಾಗದಲ್ಲಿ 595 ಅಂಕ(99.16 ಶೇ.)ಗಳನ್ನು ಗಳಿಸುವ ಮೂಲಕ ಇನ್ನಿತರ 12 ಮಂದಿಯೊಂದಿಗೆ ತೃತೀಯ ಸ್ಥಾನವನ್ನು ಹಂಚಿಕೊಂಡಿದ್ದಾರೆ.

ತನ್ನ ಈ ಸಾಧನೆಗೆ ದೇವರ ದಯೆ ಹಾಗೂ ಕಾಲೇಜಿನ ಎಲ್ಲರ ಪ್ರೋತ್ಸಾಹವೇ ಕಾರಣ ಎಂದು ಕೃತಜ್ಞತಾ ಪೂರ್ವಕವಾಗಿ ನುಡಿಯುತ್ತಾರೆ. ಪರೀಕ್ಷೆಯ ಸಂದರ್ಭದಲ್ಲಿ ಅವರು ತೀವ್ರ ರೀತಿಯ ಆರೋಗ್ಯ ಸಮಸ್ಯೆಯಿಂದ ಬಳಲುತಿದ್ದರು. ಕಾಲಿನ ಮೂಳೆಕಟ್ಟು ಹರಿದುದರಿಂದ ಉಂಟಾದ ತೀವ್ರ ನೋವಿನ ನಡುವೆಯೇ ಅವರು ಪರೀಕ್ಷೆಗೆ ತಯಾರಿ ನಡೆಸಿದ್ದರು.

‘ನಾನು ಪ್ರಾರಂಭದಿಂದಲೂ ಸತತವಾಗಿ ಓದುವ ಅಭ್ಯಾಸವನ್ನು ಮಾಡಿಕೊಂಡಿದ್ದೆ. ಅದು ನನಗೆ ತುಂಬಾ ಸಹಾಯವಾಯಿತು.’ ಎಂದವರು ಹೇಳಿದರು.

ವಿದ್ಯಾರ್ಥಿಗಳು ಉತ್ತಮ ಶಿಕ್ಷಣದೊಂದಿಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲೂ ಭಾಗವಹಿಸಲು ಪ್ರೋತ್ಸಾಹ ದೊರೆಯಬೇಕು ಎಂದು ಅಭಿಪ್ರಾಯಪಟ್ಟ ಸಾನ್ವಿ ರಾವ್, ತಾನು ಯಕ್ಷಗಾನದ ಅಭ್ಯಾಸದಲ್ಲಿ ಪಾಲ್ಗೊಂಡಿದ್ದು ಮಾತ್ರವಲ್ಲದೇ, ಅದರಲ್ಲಿ ಮೊದಲ ಬಾರಿ ಪ್ರದರ್ಶನವನ್ನೂ ನೀಡಿದ್ದೆ ಎಂದು ಹೆಮ್ಮೆಯಿಂದ ಹೇಳಿಕೊಂಡರು. ‘ನಾನು ಪ್ರಾರಂದಿಂದಲೂ ಸತತವಾಗಿ ಓದುವ ಅಭ್ಯಾಸವನ್ನು ಮಾಡಿಕೊಂಡಿದ್ದೆ. ಅದು ನನಗೆ ತುಂಬಾ ಸಹಾಯವಾಯಿತು.’ ಎಂದವರು ಹೇಳಿದರು.

ವಿದ್ಯಾರ್ಥಿಗಳು ಉತ್ತಮ ಶಿಕ್ಷಣದೊಂದಿಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲೂ ಭಾಗವಹಿಸಲು ಪ್ರೋತ್ಸಾಹ ದೊರೆಯಬೇಕು ಎಂದು ಅಭಿಪ್ರಾಯಪಟ್ಟ ಸಾನ್ವಿರಾವ್, ತಾನು ಯಕ್ಷಗಾನದ ಅಭ್ಯಾಸದಲ್ಲಿ ಪಾಲ್ಗೊಂಡಿದ್ದು ಮಾತ್ರವಲ್ಲದೇ, ಅದರಲ್ಲಿ ಮೊದಲ ಬಾರಿ ಪ್ರದರ್ಶನವನ್ನೂ ನೀಡಿದ್ದೆ ಎಂದು ಹೆಮ್ಮೆಯಿಂದ ಹೇಳಿಕೊಂಡರು.

ಇದರೊಂದಿಗೆ ಎನ್ನೆಸ್ಸೆಸ್ ನಲ್ಲೂ ಪಾಲ್ಗೊಂಡಿದ್ದ ಸಾನ್ವಿ ರಾವ್, ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ನಲ್ಲಿ ರಾಜ್ಯ ಪ್ರಶಸ್ತಿಯನ್ನು ಗೆಲ್ಲುವ ಅವಕಾಶವೂ ತನಗೆ ಸಿಕ್ಕಿತ್ತು ಎಂದು ಹೇಳಿ ಹೆಮ್ಮೆಪಟ್ಟರು.

ಭವಿಷ್ಯದಲ್ಲಿ ಯಶಸ್ವಿ ಸಿಎ ಆಗುವ ಗುರಿಯಿರುವುದಾಗಿ ಹೇಳಿಕೊಂಡ ಸಾನ್ವಿ ರಾವ್, ಇದಕ್ಕಾಗಿ ಕಾಲೇಜಿನಲ್ಲಿ ಸಿಎ ಫೌಂಡೇಷನ್ ಕ್ಲಾಸ್ ನಲ್ಲಿ ಭಾಗವಹಿಸುತ್ತಿರುವುದಾಗಿ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News