×
Ad

ಡಿ.3ರಂದು ’ನಾರೀ ಶಕ್ತಿ ಸಂಗಮ’ ಮಹಿಳಾ ಸಮ್ಮೇಳನ

Update: 2023-12-02 18:38 IST

ಸಾಂದರ್ಭಿಕ ಚಿತ್ರ

ಉಡುಪಿ, ಡಿ.2: ಮಹಿಳಾ ಸಮನ್ವಯ ಮಂಗಳೂರು ವಿಭಾಗ ಹಾಗೂ ಸೇವಾ ಸಂಗಮ ಟ್ರಸ್ಟ್‌ದ ಸಹಯೋಗದೊಂದಿಗೆ ’ನಾರೀ ಶಕ್ತಿ ಸಂಗಮ’ ಮಹಿಳಾ ಸಮ್ಮೇಳನವನ್ನು ಡಿ.3ರಂದು ಬೆಳಿಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಆಯೋಜಿಸ ಲಾಗಿದೆ ಎಂದು ಯರ್ಲಪಾಡಿ ರಾಮಕೃಷ್ಣ ಶಾರದಾ ಆಶ್ರಮದ ಸ್ಥಾಪಾಕಾಧ್ಯಕ್ಷೆ ಸುಮತ ನಾಯಕ್ ತಿಳಿಸಿದ್ದಾರೆ.

ಉಡುಪಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮ್ಮೇಳನವನ್ನು ಮಾಹೆಯ ಯೋಗ ವಿಭಾಗದ ಮುಖ್ಯಸ್ಥೆ ಪ್ರೊ.ಅನ್ನಪೂರ್ಣ ಕೆ. ಆಚಾರ್ಯ ಉದ್ಘಾಟಿಸಲಿರುವರು. ಮಹಿಳೆ ಯರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಆಯೋಜಿಸಲಾದ ಸಮ್ಮೇಳನದಲ್ಲಿ ಸುಮಾರು 1,500 ಮಹಿಳೆ ಯರು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ ಎಂದರು.

ಸ್ವಾತಂತ್ರ್ಯ ಪೂರ್ವದಲ್ಲಿ ಹೋರಾಟ ಮಾಡಿದ ವೀರ ಮಹಿಳೆಯರ ಹಾಗೂ ಸ್ವಾತಂತ್ರ್ಯ ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತಹ ಮಹಿಳಾ ಸಾಧಕಿಯರ ಚಿತ್ರಗಳನ್ನು ಎಲ್‌ಇಡಿ ಮೂಲಕ ಪ್ರದರ್ಶನ ಮಾಡಲಾಗುತ್ತದೆ. ಸಂಜೀವಿನಿ ಸ್ವಸಹಾಯ ಗುಂಪಿನ ಮಹಿಳೆಯರು ತಯಾರಿಸಿದ ವಿವಿಧ ಉತ್ಪನ್ನಗಳ, ಪುಸ್ತಕ ಭಂಡಾರ ಮತ್ತು ಗೋವು ಉತ್ಪನ್ನಗಳ ಮಳಿಗೆಗಳು ಇರಲಿವೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರತಿಭಾ ಎಂ.ಎಲ್.ಸಾಮಗ, ಗೀತಾ ಆನಂದ ಕುಂದರ್, ರೇಷ್ಮಾ ಉದಯ್ ಶೆಟ್ಟಿ, ಸುಬ್ರಹ್ಮಣ್ಯ ಹೊಳ್ಳ, ಶಶಿಕಲಾ ಕೆ. ಹೆಗ್ಡೆ, ಮಿತ್ರಪ್ರಭಾ ಹೆಗ್ಡೆ, ಸಂಧ್ಯಾ ಶೆಣೈ, ಶಿಲ್ಪಾಜಿ.ಸುವರ್ಣ, ಸಂಧ್ಯಾ ರಮೇಶ್, ನಳಿನಿ ಪ್ರದೀಪ್ ರಾವ್, ಶಕುಂತಲಾ, ಕಲ್ಪನಾ ಭಾಸ್ಕರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News