ಕಾರ್ಕಳ | ಕಾರುಗಳ ಮಧ್ಯೆ ಅಪಘಾತ: ಏಳು ಮಂದಿಗೆ ಗಾಯ
ಕಾರ್ಕಳ, ನ.12: ಸಾಣೂರು ಸೇತುವೆ ಬಳಿ ನ.11ರಂದು ಸಂಜೆ ವೇಳೆ ಎರಡು ಕಾರುಗಳ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಏಳು ಮಂದಿ ಗಾಯ ಗೊಂಡ ಬಗ್ಗೆ ವರದಿಯಾಗಿದೆ.
ಗಾಯಗೊಂಡವರನ್ನು ವರಂಗ ಗ್ರಾಮದ ಮುನಿಯಾಲುವಿನ ಮಹಮ್ಮದ್ ಹನೀಫ್, ಅವರ ಪತ್ನಿ ಹನ್ನತ್ ಬಿ.ಬಿ., ತಾಯಿ ಮಮ್ತಾಜ್, ತಂದೆ ಇಸುಬು, ತಂಗಿ ಜೀನತ್ ಮತ್ತು ರೀಹಾ ಹಾಗೂ ಇನ್ನೊಂದು ಕಾರಿನ ಚಾಲಕಿ ಅನುಷಾ ಎಂದು ಗುರುತಿಸಲಾಗಿದೆ.
ಇವರು ಮನೆಯಿಂದ ಕಾರಿನಲ್ಲಿ ಮಂಗಳೂರಿಗೆ ಹೋಗುತ್ತಿದ್ದಾಗ ಮೂಡಬಿದ್ರಿ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಕಾರು ಎದುರಿನಿಂದ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ಹನೀಫ್ ಅವರ ಕಾರಿನಲ್ಲಿದ್ದ ಆರು ಮಂದಿ ಗಾಯಗೊಂಡಿದ್ದು, ಅವರನ್ನು ಕಾರ್ಕಳ ಖಾಸಗಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಿಸಲಾಗಿದೆ. ಅಘಘಾತದಿಂದ ಎರಡು ಕಾರುಗಳು ಜಖಂಗೊಂಡಿವೆ. ಈ ಅಪಘಾತಕ್ಕೆ ಕಾರು ಚಾಲಕಿ ಅನುಷಾ ಅವರ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣ ಎಂದು ದೂರಲಾಗಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.