×
Ad

ಎಕೆಎಂಎಸ್ ಸೈಫುದ್ದೀನ್ ಕೊಲೆ ಪ್ರಕರಣ| ಒಳಸಂಚು ರೂಪಿಸಿದ ಆರೋಪ: ಮಹಿಳೆಯ ಬಂಧನ

Update: 2025-10-04 19:03 IST

ಉಡುಪಿ, ಅ.4: ಎಕೆಎಂಎಸ್ ಬಸ್ ಮಾಲಕ, ರೌಡಿ ಶೀಟರ್ ಸೈಫ್ ಯಾನೆ ಸೈಫುದ್ದೀನ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೋರ್ವ ಆರೋಪಿಯನ್ನು ಮಲ್ಪೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತಳನ್ನು ಈಗಾಗಲೇ ಬಂಧನಕ್ಕೆ ಒಳಗಾಗಿರುವ ಆರೋಪಿ ಮುಹಮ್ಮದ್ ಫೈಜಲ್ ಖಾನ್ ಪತ್ನಿ ರಿಧಾ ಶಭನಾ (27) ಎಂದು ಗುರುತಿಸಲಾಗಿದೆ. ಈಕೆ ಸೈಫುದ್ದಿನ್ ಕೊಲೆ ಪ್ರಕರಣಕ್ಕೆ ಸಂಬಧಿಸಿದಂತೆ ಕೊಲೆಗೆ ಒಳಸಂಚು ರೂಪಿಸಿ ಕೃತ್ಯದಲ್ಲಿ ಭಾಗಿಯಾಗಿದ್ದಳು. ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಈ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರ ಸಂಖ್ಯೆ ನಾಲ್ಕಕ್ಕೇರಿದೆ.

ಸೆ.27ರಂದು ಸೈಫುದ್ದೀನ್‌ನನ್ನು ಅವರ ಕೊಡವೂರು ಮನೆಯಲ್ಲಿ ಆರೋಪಿ ಗಳಾದ ಮುಹಮ್ಮದ್ ಫೈಜಲ್ ಖಾನ್, ಮುಹಮ್ಮದ್ ಶರೀಫ್, ಅಬ್ದುಲ್ ಶುಕೂರು ಮಾರಾಕಾಯುಧಗಳಿಂದ ಕೊಚ್ಚಿ ಕೊಲೆಗೈದಿದ್ದರು. ಈ ಮೂವರನ್ನು ಸೆ.28ರಂದು ಪೊಲೀಸರು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News