×
Ad

ಮೀನು ಮಾರಾಟಗಾರರಿಂದ ಅರ್ಜಿ ಆಹ್ವಾನ

Update: 2024-09-10 21:17 IST

ಉಡುಪಿ, ಸೆ.10: ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಯಡಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮೂಲಕ ಚಲಿಸಬಲ್ಲ ಇ-ತ್ರಿಚಕ್ರ ವಿದ್ಯುತ್ ಚಾಲಿತ ಸುಸಜ್ಜಿತ ಪರಿಸರ ಸ್ನೇಹಿ ಕಿಯಾಸ್ಕ್ ‘ಮತ್ಸ್ಯಾವಾಹಿನಿ’ ವಾಹನಗಳಲ್ಲಿ ತಾಜಾ ಮೀನು ಮಾರಾಟಕ್ಕೆ ಹಾಗೂ ಮೀನು ಉತ್ಪನ್ನಗಳ ಮಾರಾಟಕ್ಕಾಗಿ ಪರವಾನಗಿ ಆಧಾರದಲ್ಲಿ ಪಡೆಯುವ ಬಗ್ಗೆ ಜಿಲ್ಲೆಯ ಆಸಕ್ತ ಮೀನು ಮಾರಾಟಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.

ಸಾಮಾನ್ಯ ವರ್ಗದವರಿಗೆ 1 ಲಕ್ಷ ರೂ., ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳಾ ವರ್ಗದವರಿಗೆ 50,000ರೂ. ಭದ್ರತಾ ಠೇವಣಿ ನಿಗದಿ ಪಡಿಸಲಾಗಿದ್ದು, ಆಯ್ಕೆಯಾದ ಪರವಾನಗಿದಾರರಿಗೆ ಪ್ರತಿ ವಾಹನಕ್ಕೆ 3000 ರೂ. ಮಾಸಿಕ ಶುಲ್ಕ ನಿಗದಿಪಡಿಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಉಡುಪಿ, ಕುಂದಾಪುರ ಹಾಗೂ ಕಾರ್ಕಳ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಇಲಾಖೆ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News