ಬ್ಲ್ಯಾಕ್‌ಮೇಲ್ ದಂಧೆ: ಮೂರನೇ ಪ್ರಕರಣ ದಾಖಲು
ಉಡುಪಿ, ಜು.9: ವಿಡಿಯೋ ಇದೆ ಎಂದು ಹೇಳಿ ಬ್ಲ್ಯಾಕ್‌ಮೇಲ್ ಮಾಡಿ ಲಕ್ಷಾಂತರ ರೂ. ಹಣ ಪಡೆದು ಮೋಸ ಮಾಡಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಮೂರನೇ ಪ್ರಕರಣ ದಾಖಲಾಗಿದೆ.
ಬನ್ನಂಜೆ ತೇಜೇಶ್ವರ ರಾವ್ 2018ರಿಂದ 2022ರವರೆಗೆ ಉಡುಪಿಯ ಮಹಾಮಾಯ ಕಾಂಪ್ಲೆಕ್ಸ್‌ನಲ್ಲಿ ಮೋದಿಕೇರ್ ಸ್ಟಾಕ್ ಪಾಯಿಂಟ್ ಅಂಗಡಿ ಯನ್ನು ಹೊಂದಿದ್ದು, ಈ ಸಮಯದಲ್ಲಿ ಝೀನತ್ ಮತ್ತು ಗೀತಾರಾವ್ ಎಂಬವರ ಪರಿಚಯ ವಾಗಿತ್ತು. ಮೋದಿಕೇರ್ ಕಛೇರಿಯಲ್ಲಿ ಜೀನತ್, ತೇಜೇಶ್ವರ ರಾವ್‌ರೊಂದಿಗೆ ಸೆಲ್ಪಿ ತೆಗೆದುಕೊಳ್ಳುವ ನೆಪದಲ್ಲಿ ಒಂದು ವಿಡಿಯೋ ಮಾಡಿಕೊಂಡು ಅಕ್ರಮ ಲಾಭವನ್ನು ಗಳಿಸುವ ಉದ್ದೇಶದಿಂದ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು ಎಂದು ದೂರಲಾಗಿದೆ.
ಹೀಗೆ ಜೀನತ್, ತೇಜೇಶ್ವರ ರಾವ್ ಅವರಿಂದ ಹಂತ ಹಂತವಾಗಿ 36,84,000ರೂ.ವನ್ನು ಮೋಸದಿಂದ ತೆಗೆದು ಕೊಂಡಿದ್ದರು. ಅದೇ ರೀತಿ ಗೀತಾ ರಾವ್ ಕೂಡ ತೇಜೇಶ್ವರ ರಾವ್ ಅವರನ್ನು ಬ್ಲ್ಯಾಕ್ ಮೇಲ್ ಮಾಡಿ ಹಂತ ಹಂತ ವಾಗಿ 15,00,000ರೂ. ಹಣ, ಚಿನ್ನಾಭರಣ ಹಾಗೂ ಕೆಲವು ಖಾಲಿ ಚೆಕ್‌ಗಳನ್ನು ಮೋಸದಿಂದ ತೆಗೆದುಕೊಂಡಿರು ವುದಾಗಿ ದೂರಲಾಗಿದೆ.