×
Ad

ಬೈಂದೂರು | ಪ್ರತ್ಯೇಕ ಪ್ರಕರಣ: ಇಬ್ಬರು ಆತ್ಮಹತ್ಯೆ

Update: 2025-12-10 21:45 IST

ಬೈಂದೂರು, ಡಿ.10: ವಿಪರೀತ ಮದ್ಯಪಾನ ಮಾಡುವ ಚಟದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಪಡುವರಿ ಗ್ರಾಮದ ದೊಂಬೆಯ ನರಸಿಂಹ ಪೂಜಾರಿ(62) ಎಂಬವರು ಡಿ.7ರಂದು ಪಡುವರಿ ಗ್ರಾಮದ ಚೌಕಿಮನೆ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂಗೊಳ್ಳಿ: ತಲೆನೋವು ಮತ್ತು ಬ್ಯಾಂಕ್ ಹಾಗೂ ಸಂಘಗಳಲ್ಲಿ ಮಾಡಿರುವ ಸಾಲದ ಬಗ್ಗೆ ಜೀವನದಲ್ಲಿ ಜಿಗುಪ್ಸೆಗೊಂಡ ಗಂಗೊಳ್ಳಿ ಖಾರ್ವಿಕೇರಿ ನಿವಾಸಿ ಬಸವ ಖಾರ್ವಿ ಎಂಬವರ ಪತ್ನಿ ಭಾರತಿ(42) ಎಂಬವರು ಡಿ.9ರಂದು ಮಧ್ಯಾಹ್ನ ಮನೆಯ ರೂಮಿನ ಮರದ ಅಡ್ಡೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News