ಇಸ್ಪೀಟು ಜುಗಾರಿ: ಮೂವರ ಬಂಧನ
Update: 2025-08-16 21:07 IST
ಗಂಗೊಳ್ಳಿ, ಆ.16: ಹರ್ಕೂರು ಗ್ರಾಮದ ಬಾಳೆಹಿತ್ಲು ಬಳಿ ಆ.15ರಂದು ಸಂಜೆ ವೇಳೆ ಇಸ್ಪೀಟು ಜುಗಾರಿ ಆಡುತ್ತಿದ್ದ ಮೂವರನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.
ಚಿತ್ತರಂಜನ್(53), ಮಹಾಬಲ ಕುಪ್ಪಯ್ಯ ಪೂಜಾರಿ(56), ಗಣೇಶ ಗಾಣಿಗ(55) ಬಂಧಿತ ಆರೋಪಿಗಳು. ದಾಳಿ ವೇಳೆ ಚಂದ್ರ, ರಾಜೇಂದ್ರ ದೇವಾಡಿಗ, ಬಾಲರಾಜ್ ಎಂಬವರು ಪರಾರಿಯಾಗಿದ್ದಾರೆ. ಬಂಧಿತರಿಂದ 6,220ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.