×
Ad

ಹೆಮ್ಮಾಡಿ, ಕಟ್‌ಬೆಲ್ತೂರಿನಲ್ಲಿ ಸಿಐಟಿಯು ಪ್ರಚಾರಾಂದೋಲನ

Update: 2023-08-07 20:28 IST

ಕುಂದಾಪುರ: ಹೆಮ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂದು ಸಿಐಟಿಯು ಪ್ರಚಾರಾಂದೋಲನ ಸಭೆ ನಡೆಯಿತು.

ಸಭೆಯಲ್ಲಿ ಸಿಐಟಿಯು ಸಂಚಾಲಕ ಚಂದ್ರಶೇಖರ ವಿ., ಕಟ್ಟಡ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಮ್ಮಾಡಿ ಮಾತನಾಡಿದರು. ಹೆಮ್ಮಾಡಿ ಪೇಟೆಯಲ್ಲಿ ಮೆರವಣಿಗೆ ನಡೆಸಿ ಕರಪತ್ರ ಹಂಚಿದರು.

ಕಟ್‌ಬೇಲ್ತೂರು ಗ್ರಾಮದಲ್ಲಿ ಸ್ವಾತಂತ್ರ್ಯ ಪ್ರಜಾಪ್ರಭುತ್ವ ಸಂವಿಧಾನ ರಕ್ಷಣೆಗಾಗಿ ರೈತ ಕೂಲಿಕಾರರ ಕಾರ್ಮಿಕರ ಪ್ರಚಾರಾಂದೋಲನ ನಡೆಯಿತು.

ಸಭೆಯನ್ನುದ್ದೇಶಿಸಿ ಕಟ್ಟಡ ಕಾರ್ಮಿಕರ ಸಂಘಟನೆ ಪ್ರಧಾನ ಕಾರ್ಯದರ್ಶಿ ಸಂತೋಷ್ ಹೆಮ್ಮಾಡಿ, ಕೇಂದ್ರ ಸರ್ಕಾರದ ಕಾರ್ಮಿಕ ರೈತ ಕೂಲಿಕಾರರ ವಿರೋಧಿ ನೀತಿಗಳನ್ನು ವಿವರಿಸಿ ಮಾತನಾಡಿದರು. ನಂತರ ಕಟ್ ಬೇಲ್ತೂರು ಪೇಟೆಯಲ್ಲಿ ಕರಪತ್ರ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಕಟ್‌ಬೇಲ್ತೂರು ಘಟಕದ ಅಧ್ಯಕ್ಷ ಶ್ರೀಧರ್ ಗಾಣಿಗ, ರಮೇಶ್, ನರಸಿಂಹ ಹೆಮ್ಮಾಡಿ, ಜಗದೀಶ್ ಆಚಾರ್ ಮೊದಲಾದವರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News