×
Ad

ಸಾರಿಗೆ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚನೆಗೆ ಸಚಿವರಿಗೆ ಸಿಐಟಿಯು ಮನವಿ

Update: 2023-11-20 21:37 IST

ಉಡುಪಿ : ಸಾರಿಗೆ ಕಾರ್ಮಿಕರಿಗೆ ಕಲ್ಯಾಣ ಮಂಡಳಿ ರಚಿಸುವಂತೆ ಆಗ್ರಹಿಸಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಇಂದು ಮಣಿಪಾಲದ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಿಐಟಿಯು ನಿಯೋಗ ಮನವಿ ಸಲ್ಲಿಸಿತು.

ಕುಂದಾಪುರ ತಾಲೂಕು ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ, ಹಾಗೂ ಉಡುಪಿ ಜಿಲ್ಲಾ ಆಟೋ ರಿಕ್ಷಾ ಮತ್ತು ವಾಹನ ಚಾಲಕರ ಸಂಘ ಬ್ರಹ್ಮಾವರ ವತಿಯಿಂದ ಸಾರಿಗೆ ನೌಕರರಿಗೆ ಜೀವನ ಭದ್ರತೆಗಾಗಿ ಕಲ್ಯಾಣ ಮಂಡಳಿ ರಚಿಸಲು ಒತ್ತಾಯಿಸಲಾಯಿತು.

ದುಬಾರಿ ದಂಡಕ್ಕೆ ಕಾರಣವಾಗುವ ಹಾಗೂ ಸಾರಿಗೆ ರಂಗದ ಖಾಸಗಿಕರಣಕ್ಕೆ ಕಾರಣವಾಗುವ ಮೋಟಾರು ವಾಹನ ಕಾಯ್ದೆ 2019ರ ವಾಪಸಾತಿಗೆ ಆಗ್ರಹಿಸ ಲಾಯಿತು. ಸಿಐಟಿಯು ಮುಖಂಡರಾದ ಚಂದ್ರಶೇಖರ ವಿ., ಬಾಲಕೃಷ್ಣ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News