×
Ad

ಕೇಂದ್ರದಿಂದ ರೈತರ, ಕೂಲಿಕಾರರ, ಕಾರ್ಮಿಕರ ಬೇಡಿಕೆ ನಿರ್ಲಕ್ಷ್ಯ: ಚಂದ್ರಶೇಖರ್ ಆರೋಪ

Update: 2023-08-08 17:16 IST

ಕುಂದಾಪುರ: ದೇಶದ ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ಕೇಂದ್ರ ಸರಕಾರ ನವ ಉದಾರವಾದಿ ಆರ್ಥಿಕ ನೀತಿಗಳು ವಿಷ ವುಣ್ಣಿಸುತ್ತಿದೆ. ರೈತರ ಕೂಲಿಕಾರರ ಕಾರ್ಮಿಕರ ಬೇಡಿಕೆಗಳನ್ನು ಕಡೆಗಣಿಸುತ್ತಿದೆ. ಇದರ ವಿರುದ್ಧ ರೈತ ಕಾರ್ಮಿಕ ಕೂಲಿಕಾರರು ದೇಶ ವ್ಯಾಪಿ ಹೋರಾಡಲು ತೀರ್ಮಾನಿಸಿದೆ ಎಂದು ರೈತ ಸಂಘದ ಮುಖಂಡ ಚಂದ್ರಶೇಖರ ಹೇಳಿದ್ದಾರೆ.

ಕಂಡ್ಲೂರು ಪೇಟೆಯಲ್ಲಿ ಇಂದು ನಡೆದ ರೈತ ಕಾರ್ಮಿಕರು ಕೂಲಿಕಾರರ ಪ್ರಚಾರಾಂದೋಲನ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಕಾರ್ಮಿಕ ಮುಖಂಡರಾದ ಕೆ.ಶಂಕರ್, ಸುರೇಶ್ ಕಲ್ಲಾಗರ ಮಾತನಾಡಿದರು. ಎಚ್.ನರಸಿಂಹ ಸ್ವಾಗತಿಸಿದರು. ಪ್ರಚಾರಾಂದೋಲನದಲ್ಲಿ ರವಿ ಕಳಂಜಿ, ರಾಮ ಹೇರಿಕೆರೆ, ರಾಘವೇಂದ್ರ ಬಳ್ಕೂರು, ಕೃಷ್ಣ ದಯಾನಂದ ಮೂಡುಬಗೆ ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News