×
Ad

ಕರಾಟೆ ತರಬೇತಿ ಕೇಂದ್ರಕ್ಕೆ ಅನುದಾನ: ಉಡುಪಿ ಡಿಸಿಗೆ ಮನವಿ

Update: 2023-08-22 20:26 IST

ಉಡುಪಿ, ಆ.22: ಪ್ರವೀಣಾ ಕರಾಟೆ ಕ್ಲಬ್ ಪ್ರರ್ಕಳ ಇದರ ಕರಾಟೆ ತರಬೇತಿ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಒದಗಿಸುವಂತೆ ಆಗ್ರಹಿಸಿ ಉಡುಪಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಪರ್ಕಳ ಹೈಸ್ಕೂಲ್ ಬಳಿ ಸುರಕ್ಷಾ ಸಭಾಭವನದ ಎದುರು ನಿರ್ಮಾಣಗೊಳ್ಳಲಿರುವ ನೂತನ ಕಟ್ಟಡಕ್ಕೆ ಸುಮಾರು 20ಲಕ್ಷ ರೂ. ಅನುದಾನವನ್ನು ಕ್ರೀಡಾ ಇಲಾಖೆಯ ಮೂಲಕ ಬಿಡುಗಡೆ ಮಾಡಲು ತಕ್ಷಣ ಕ್ರಮಕೈಳ್ಳುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಕರಾಟೆ ಪ್ರಶಸ್ತಿ ಪುರಸ್ಕೃತೆ ಪ್ರವೀಣಾ ಸುವರ್ಣ, ಕಾಂಗ್ರೆಸ್ ಹಿರಿಯ ಮುಖಂಡರಾದ ಜಯಶೆಟ್ಟಿ ಬನ್ನಂಜೆ, ಗಣೇಶ್ ಶೆಟ್ಟಿ ಕೀಳಂಜೆ, ಹಾಗೂ ಕರಾಟೆಯ ವಿದ್ಯಾರ್ಥಿಗಳು ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News