ಉಡುಪಿ: ಬೃಹತ್ ತ್ರಿವರ್ಣ ಧ್ವಜ ಪ್ರದರ್ಶನ
Update: 2025-08-15 22:53 IST
ಉಡುಪಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ನಗರದ ಮಾರುಥಿ ವೀಥಿಕಾದಲ್ಲಿ ನಡೆದ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಬೃಹತ್ ತ್ರಿವರ್ಣ ಧ್ವಜ ಪ್ರದರ್ಶಿಸಲಾಯಿತು.
ಧ್ವಜ ಪ್ರದರ್ಶನಕ್ಕೆ ಹಿರಿಯ ಸಿವಿಲ್ ನ್ಯಾಯಾದೀಶ ಯೋಗೇಶ್ ಪಿ.ಆರ್. ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ ಕೋಟಕ್ ಮಹಿಂದ್ರಾ ಬ್ಯಾಂಕಿನ ಮ್ಯಾನೇಜರ್ ವಿವೇಕ್ ಹೆಗ್ಡೆ, ಮಿತ್ರ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ವನಿತಾ, ಹಾಗೂ ವಿದ್ಯಾರ್ಥಿನಿಯರು ಭಾಗಿಯಾಗಿದ್ದರು. ಪಾಕತಜ್ಞ ಶ್ರೀಧರ ಭಟ್ ಉಪಾಹಾರವನ್ನು ಉಚಿತವಾಗಿ ಒದಗಿಸಿದರು.