×
Ad

ಐಸಿವೈಎಂ ಬ್ಲೂಮ್ ಯುವ ಸಮಾವೇಶ: ಕಲ್ಯಾಣಪುರ ವಲಯಕ್ಕೆ ಸಮಗ್ರ ಪ್ರಶಸ್ತಿ

Update: 2023-09-27 19:27 IST

ಉಡುಪಿ, ಸೆ.27: ಕಲ್ಯಾಣಪುರ ಮೌಂಟ್ ರೋಜರಿ ಚರ್ಚಿನ ಸಭಾಂಗಣ ದಲ್ಲಿ ರವಿವಾರ ಹಮ್ಮಿಕೊಳ್ಳಲಾದ ಉಡುಪಿ ಧರ್ಮಕ್ಷೇತ್ರದ ಐಸಿವೈಎಂನ ಸಮಾವೇಶದಲ್ಲಿ ಐಸಿವೈಎಂ ಕಲ್ಯಾಣಪುರ ವಲಯ ಸಮಗ್ರ ಪ್ರಶಸ್ತಿ ಗೆದ್ದು ಕೊಂಡಿತು. ಐಸಿವೈಎಂ ಉಡುಪಿ ವಲಯ ರನ್ನರ್‌ಅಪ್ ಪ್ರಶಸ್ತಿ ಪಡೆಯಿತು.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ಉಡುಪಿ ಧರ್ಮಕೇಂದ್ರದ ಶ್ರೇಷ್ಟ ಗುರು ವಂ.ಫರ್ಡಿನಾಂಡ್ ಗೊನ್ಸಾಲ್ವೆಸ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಂತೆಕಟ್ಟೆ ಮೌಂಟ್ ರೋಜರಿ ಚರ್ಚಿನ ಧರ್ಮಗುರು ವಂ.ಡಾ.ರೋಕ್ ಡಿಸೋಜ, ದಾಯ್ಜಿ ವರ್ಲ್ಡ್‌ನ ಮ್ಯಾನೇಜಿಂಗ್ ಡೈರೆಕ್ಟರ್ ವಾಲ್ಟರ್ ನಂದಳಿಕೆ ಮಾತನಾಡಿದರು.

ಕರ್ನಾಟಕ ಪ್ರಾಂತೀಯ ಐಸಿವೈಎಂ ಅಧ್ಯಕ್ಷ ನೇವಿನ್ ಆಂಟ್ಯನಿ, ವೈಸಿಎಸ್/ ವೈಎಸ್‌ಎಂ ರಾಷ್ಟೀಯ ಅಧ್ಯಕ್ಷ ಅ್ಯನ್ಸನ್ ನಜರೆತ್, ಸಂತೆಕಟ್ಟೆ ಮೌಂಟ್ ರೋಜರಿ ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷ ಲೂಕ್ ಡಿಸೋಜ, ಉಡುಪಿ ಧರ್ಮ ಕೇಂದ್ರದ ಐಸಿವೈಎಂ ನಿರ್ದೇಶಕ ವಂ.ಸ್ಟೀವನ್ ಫೆರ್ನಾಂಡಿಸ್, ಉಡುಪಿ ವಲಯದ ಐಸಿವೈಎಂ ನಿರ್ದೇಶಕ ವಂ. ರೋನ್ಸನ್ ಡಿಸೋಜ, ಉಡುಪಿ ಧರ್ಮಕೇಂದ್ರದ ಐಸಿವೈಎಂ ಅಧ್ಯಕ್ಷೆ ಅ್ಯಶ್ಲಿ ಡಿಸೋಜ, ಕಾರ್ಯದರ್ಶಿ ಶೈನಿ ಅಲ್ವಾ ಉಪಸ್ಥಿತರಿದ್ದರು. ಪ್ರೀತೆಶ್ ಪಿಂಟೊ ವಂದಿಸಿದರು. ಆಶೀಷ್ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಲ್ಯಾಣಪುರ ಮಿಲಾಗ್ರಿಸ್ ಚರ್ಚಿನ ಧರ್ಮಗುರು ಅತೀ ವಂ.ವಲೇರಿಯನ್ ಮೆಂಡೋನ್ಸಾ ವಹಿಸಿದ್ದರು. ಉಡುಪಿ ಧರ್ಮಕೇಂದ್ರದ ಐಸಿವೈಎಂ ಕಾರ್ಯದರ್ಶಿ ಶೈನಿ ಅಲ್ವಾ ಸ್ವಾಗತಿಸಿ ದರು. ಉಡುಪಿ ಧರ್ಮಕೇಂದ್ರದ 5 ವಲಯಗಳ ಐಸಿವೈಎಂ ನಿರ್ದೇಶಕರನ್ನು ಸನ್ಮಾನಿಸಲಾಯಿತು. ಗೋಡ್ವಿನ್ ಕಾರ್ಯಕ್ರಮ ನಿರೂಪಿಸಿ ದರು. ಐಸಿವೈಎಂ ನಿರ್ದೇಶಕ ವಂ.ಸ್ಟೀವನ್ ಫೆರ್ನಾಂಡಿಸ್ ವಂದಿಸಿದರು. ಉಡುಪಿ ಧರ್ಮ ಪ್ರಾಂತ್ಯದ 450 ಅಧಿಕ ಯುವ ಜನರು ಇದರಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News