×
Ad

ಇಂದ್ರಾಳಿ: ರೈಲು ನಿಲ್ದಾಣದಲ್ಲಿದ್ದ ಅಪರಿಚಿತ ಮೂಕ ಬಾಲಕಿಯ ರಕ್ಷಣೆ

Update: 2024-08-27 14:31 IST
ಸಾಂದರ್ಭಿಕ ಚಿತ್ರ

ಉಡುಪಿ, ಅ.27: ಇಂದ್ರಾಳಿ ರೈಲು ನಿಲ್ದಾಣದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಅಪರಿಚಿತ ಮೂಗ ಬಾಲಕಿಯನ್ನು ರೈಲ್ವೆ ಪೊಲೀಸರು ಸೋಮವಾರ ರಕ್ಷಿಸಿರುವ ಬಗ್ಗೆ ವರದಿಯಾಗಿದೆ.

ರಕ್ಷಿಸಲ್ಪಟ್ಟ ಬಾಲಕಿ ಅಪ್ರಾಪ್ತಳಂತೆ ಕಂಡು ಬಂದಿದ್ದು, ಆಕೆಗೆ ಮಾತು ಬರುವುದಿಲ್ಲ ಮತ್ತು ಕಿವಿಯೂ ಕೇಳುವುದಿಲ್ಲ. ಇದರಿಂದ ಆಕೆಯ ಹೆಸರು ವಿಳಾಸ ತಿಳಿದುಬಂದಿಲ್ಲ. ಸಂಬಂಧಿಕರು ಮಣಿಪಾಲ ಪೋಲಿಸ್ ಠಾಣೆ ಅಥವಾ ನಿಟ್ಟೂರು ಸಖಿ ಕೇಂದ್ರವನ್ನು ಸಂಪರ್ಕಿಸಲು ಸೂಚಿಸಲಾಗಿದೆ.

ಆರ್ ಪಿ ಆಫ್ ಸುಧೀರ್ ಶೆಟ್ಟಿ ಬಾಲಕಿಯನ್ನು ರಕ್ಷಿಸಿದ್ದು, ತನಿಕಾಧಿಕಾರಿ ಜಿನಾ ಪಿಂಟೋ ಸಹಕರಿಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಬಾಲಕಿಗೆ ನಿಟ್ಟೂರಿನ ಸಖಿ ಕೇಂದ್ರದಲ್ಲಿ ಪುನರ್ವಸತಿ ಕಲ್ಪಿಸಲು ನೆರವಾದರು. ಪುನರ್ವಸತಿ ಪ್ರಕ್ರಿಯೆ ನಡೆಸುವಾಗ ಮಣಿಪಾಲ ಪೋಲಿಸ್ ಠಾಣೆಯ ವಿದ್ಯಾ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News