×
Ad

ಕಾರ್ಕಳ: ಸಿಡಿದ ಸುಡುಮದ್ದು ಘಟಕ; ಇಬ್ಬರಿಗೆ ಗಾಯ

Update: 2024-05-08 11:31 IST

ಕಾರ್ಕಳ: ಸುಡುಮದ್ದು ತಯಾರಿಕಾ ಘಟಕ ಸಿಡಿದು ಇಬ್ಬರು ಮಹಿಳೆಯರಿಗೆ ಗಾಯಗಳಾದ ಘಟನೆ ಕಾರ್ಕಳ ತಾಲೂಕಿನ ಕಾರ್ಕಳ ಕಸಬಾ ಗ್ರಾಮದ ಹಿಮ್ಮುಂಜೆ ಬಳಿಯ ಕಜೆ ಎಂಬಲ್ಲಿ ಬುಧವಾರ ನಡೆದಿದೆ.

ಕಾರ್ಕಳ ಕಸಬಾ ಗ್ರಾಮದ ಹಿಮ್ಮುಂಜೆ ಬಳಿಯ ಕಜೆ ಎಂಬಲ್ಲಿ ಕೆಲವಾರು ವರ್ಷಗಳಿಂದ ಸುಡುಮದ್ದು ತಯಾರಿಕಾ ಘಟಕ ಕಾರ್ಯಾಚರಿಸುತ್ತಿದ್ದು ಎಂದಿನಂತೆ ಇಂದು ಬೆಳಗ್ಗೆ ಸುಡುಮದ್ದು ತಯಾರಿಕೆ ಸಂದರ್ಭ ಅನಿರೀಕ್ಷಿತವಾಗಿ ಸ್ಫೋಟಗೊಂಡಿದೆ. 

ಸುಡುಮದ್ದು ತಯಾರಿಕಾ ಘಟಕದಲ್ಲಿ 3 ಬೇರೆ ಬೇರೆ ಕಟ್ಟಡಗಳಿದ್ದು ಒಂದು ಕಟ್ಟಡ ಸ್ಫೋಟಕ್ಕೆ ತುತ್ತಾಗಿದೆ. ಸ್ಫೋಟದ ಸಂದರ್ಭ ಒಳಗೆ ಕೆಲಸ ನಿರ್ವಹಿಸುತ್ತಿರುವ ಮಹಿಳೆಯರು ಗಾಯಗೊಂಡಿದ್ದರೆ ಕಟ್ಟಡದ ಮೇಲ್ಛಾವಣಿ ಹೊತ್ತಿ ಉರಿದಿದ್ದು ಕಟ್ಟಡ ಸಂಪೂರ್ಣ ಹಾನಿ ಆಗಿದೆ.   ಗಾಯಗೊಂಡ ಮಹಿಳೆಯರಿಬ್ಬರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಸ್ಫೋಟಕ್ಕೆ ಕಾರಣ ಇನ್ನಷ್ಟೇ ತಿಳಿಯಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News