×
Ad

ಕಾರ್ಕಳ| ಟಿಪ್ಪರ್ ಚಾಲಕನ ಸಂಶಯಾಸ್ಪದ ಸಾವು: ಪ್ರಕರಣ ದಾಖಲು

Update: 2024-09-27 21:44 IST

ಕಾರ್ಕಳ, ಸೆ.27: ಟಿಪ್ಪರ್ ಚಾಲಕರೊಬ್ಬರು ಅನುಮಾನಾಸ್ಪದವಾಗಿ ಮೃತಪಟ್ಟ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತರನ್ನು ಕಾರ್ಕಳದ ಈರಣ್ಣ(40) ಎಂದು ಗುರುತಿಸಲಾಗಿದೆ. ಇವರು ಟಿಪ್ಪರ್ ಲಾರಿಯ ಚಾಲಕರಾಗಿ ಕೆಲಸ ಮಾಡಿಕೊಂಡಿದ್ದು ಸೆ.25ರಂದು ಬೆಳಗ್ಗೆ ಕೆಲಸಕ್ಕೆ ಹೋಗಿದ್ದು ಮಧ್ಯಾಹ್ನ ವೇಳೆ ಪತ್ನಿಗೆ ಕರೆ ಮಾಡಿ ಸಂಜೆ ಮನೆಗೆ ಬೇಗ ಬರುವುದಾಗಿ ತಿಳಿಸಿದ್ದರು. ಆದರೆ ನಂತರ ಮನೆಗೆ ಬಾರದೇ ನಾಪತ್ತೆಯಾಗಿ ದ್ದರು.

ಇವರು ಕುಕ್ಕುಂದೂರು ಗ್ರಾಮದ ಹತ್ತಿರದ ಮೈದಾನದಲ್ಲಿರುವ ವಾಟರ್ ಟ್ಯಾಂಕಿನ ಮೇಲೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಈ ಸಾವಿನಲ್ಲಿ ಸಂಶಯವಿರುವುದಾಗಿ ಮೃತರ ಪತ್ನಿ ಮಹಾನಂದ ಕಲ್ಯಾಣಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News