ಕಾಪು ಬ್ಲಾಕ್ ಯುವ ಕಾಂಗ್ರೆಸ್ ಚುನಾವಣೆ: ನಿಯಾಝ್ ಪಡುಬಿದ್ರಿಗೆ ಜಯ
Update: 2025-02-08 12:30 IST
ಕಾಪು: ಕಾಪು ಬ್ಲಾಕ್ ಯುವ ಕಾಂಗ್ರೆಸ್‍ಗೆ ನಡೆದ ಚುನಾವಣೆಯಲ್ಲಿ ಪಡುಬಿದ್ರಿ ಗ್ರಾಮ ಪಂಚಾಯಿತಿ ಸದಸ್ಯ ಮುಹಮ್ಮದ್ ನಿಯಾಝ್ ಜಯಗಳಿಸಿದ್ದಾರೆ.
ಇತ್ತೀಚೆಗೆ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಅಬ್ದುಲ್ ಲತೀಫ್, ಮುಹಮ್ಮದ್ ನಿಯಾಝ್, ಪ್ರಜ್ವಲ್ ಶೆಟ್ಟಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಅಬ್ದುಲ್ ಲತೀಫ್ 211, ಮುಹಮ್ಮದ್ ನಿಯಾಝ್ 1433 ಹಾಗೂ ಪ್ರಜ್ವಲ್ ಶೆಟ್ಟಿ 667 ಮತಗಳಿಸಿದ್ದರು. ಅತೀ ಹೆಚ್ಚು ಮತಗಳಿಸಿದ ಮುಹಮ್ಮದ್ ನಿಯಾಝ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, ಪ್ರಜ್ವಲ್ ಶೆಟ್ಟಿ ಹಾಗೂ ಅಬ್ದುಲ್ ಲತೀಫ್ ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಮುಹಮ್ಮದ್ ನಿಯಾಝ್ ಪಡುಬಿದ್ರಿ ಗ್ರಾಮ ಪಂಚಾಯಿತಿ ಸದಸ್ಯರಾಗಿ, ಯುವ ಕಾಂಗೆಸ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಯೂತ್ ಫೌಂಡೇಶನ್ ಪಡುಬಿದ್ರಿ ಇದರ ಉಪಾಧ್ಯಕ್ಷರಾಗಿ, ಧಾರ್ಮಿಕ, ಶೈಕ್ಷಣಿಕ ಹಾಗು ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.