×
Ad

ಕಾವಳಕಟ್ಟೆ | ಹಿದಾಯ ವಿಶೇಷ ಚೇತನ ಮಕ್ಕಳ ವಸತಿಯುತ ಶಾಲಾ ದಶಮಾನೋತ್ಸವ

Update: 2025-11-16 17:45 IST

ಬಂಟ್ವಾಳ : ಕಾವಳಕಟ್ಟೆ- ಗುರಿಮಜಲು ಹಿದಾಯ ವಿಶೇಷ ಮಕ್ಕಳ ವಸತಿಯುತ ಶಾಲೆಯ ದಶಮಾನೋತ್ಸವ ಸಮಾರಂಭವು ಇಲ್ಲಿನ ಹಿದಾಯ ಶೇರ್ ಮತ್ತು ಕೇರ್ ಕಾಲೊನಿಯಲ್ಲಿ ಭಾನುವಾರ ನಡೆಯಿತು.

ಕಾರ್ಯಕ್ರಮದ ಪೂರ್ವಭಾವಿಯಾಗಿ ಕಾವಳಕಟ್ಟೆ ಶಾಲಾ ಬಳಿಯಿಂದ ವಿಶೇಷ ಶಾಲೆಯ ಆವರಣದವರೆಗೆ ವಿದ್ಯಾರ್ಥಿಗಳು ಮತ್ತು ಪೋಷಕರ ಮೆರವಣಿಗೆ ನಡೆಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಹಿದಾಯ ವಿಶೇಷ ಶಾಲೆ ಆರಂಭವಾಗಿ ಹಾಗೂ ಹತ್ತು ವರ್ಷಗಳು ಪೂರ್ಣಗೊಂಡ ನೆನಪಿನಲ್ಲಿ ಜಿಲ್ಲೆಯ ಇಬ್ಬರು ಸಾಧಕ ವಿಶೇಷ ಮಕ್ಕಳಿಗೆ ಸನ್ಮಾನ, ವಿಶೇಷ ಮಕ್ಕಳ ಶಿಕ್ಷಕಿಯವರಿಗೆ ಗೌರವಾರ್ಪಣೆ, ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿದಾಯ ಫೌಂಡೇಶನ್ ಚೇರ್ಮೆನ್, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಝಕರಿಯಾ ಜೋಕಟ್ಟೆ ವಹಿಸಿದ್ದರು. ದಶಮಾನೋತ್ಸವ ಸಮಾರಂಭವನ್ನು ಫಲಕ ಅನಾವರಣಗೊಳಿಸುವ ಮೂಲಕ ದುಬಾಯಿಯ ಗಡಿಯಾರ್ ಗ್ರೂಪ್ ಆಫ್ ಕಂಪೆನಿ ಚೇರ್ಮೆನ್ ಇಬ್ರಾಹಿಂ ಗಡಿಯಾರ್ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಕೋಶಾಧಿಕಾರಿ ಪದ್ಮರಾಜ್ ಆರ್.ಪೂಜಾರಿ ಮಾತನಾಡಿ, ಸಮಾಜದ ಒಳಿತಿಗಾಗಿ ನಡೆಸಲ್ಪಡುವ ಎಲ್ಲಾ ಕಾರ್ಯಗಳು ದೇವರು ಮೆಚ್ಚುವ ಕಾರ್ಯಗಳಾಗಿವೆ. ಇಂತವುಗಳ ಬಗ್ಗೆ ಹೆಚ್ಚು ಪ್ರಚಾರ ನೀಡಬೇಕಾಗಿದೆ ಎಂದರು.

ಬಂಟ್ವಾಳ ತೌಹೀದ್ ಶಿಕ್ಷಣ ಸಂಸ್ಥೆಗಳ ಆಧ್ಯಕ್ಷ ರಿಯಾಝ್ ಬಂಟ್ವಾಳ, ಹಿದಾಯ ಫೌಂಡೇಶನ್ ನ ವೈಸ್ ಚೇರ್ಮೆನ್ ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಸಂಸ್ಥೆಯ ಆಡಳಿತಾಧಿಕಾರಿ‌ ಆಬಿದ್ ಅಸ್ಗರ್ ಅತಿಥಿಗಳಾಗಿ ಭಾಗವಹಿಸಿದ್ದರು .

ಹಿದಾಯ ಫೌಂಡೇಶನ್ ನ ಎಫ್.ಎಂ.ಬಶೀರ್, ಆಸಿಫ್ ಇಕ್ಬಾಲ್, ಮಕ್ಬೂಲ್ ಅಹ್ಮದ್, ಕೆ.ಎಸ್ ಅಬೂಬಕ್ಕರ್, ಹಂಝ ಆನಿಯಾ ದರ್ಬಾರ್ ಬಸ್ತಿಕೋಡಿ,‌ ಇದ್ದಿನ್ ಕುಂಞಿ, ಬಶೀರ್ ವಗ್ಗ , ಹಕೀಂ ಸುನ್ನತ್ ಕೆರೆ,‌ ಆಶಿಕ್ ಕುಕ್ಕಾಜೆ, ಇಲ್ಯಾಸ್ ಕಕ್ಕಿಂಜೆ, ಪಿ.ಮುಹಮ್ಮದ್,‌ ಸಾದಿಕ್ ಹಸನ್, ಅಬೂಬಕ್ಕರ್ ಸಿದ್ದೀಕ್, ಇಫ್ತಿಕಾರ್ ಅಹಮದ್, ರಶೀದ್ ಕಕ್ಕಿಂಜೆ, ಶರೀಫ್ ಮುಕ್ರಂಪಾಡಿ‌,‌ ಇಬ್ರಾಹೀಂ‌ ಖಲೀಲ್ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯೆಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಝಕರಿಯಾ ಜೋಕಟ್ಟೆ ಅವರನ್ನು ಹಿದಾಯ ವಿಶೇಷ ಚೇತನ ವಿದ್ಯಾರ್ಥಿಗಳು ಅಭಿನಂದಿಸಿದರು.

ಸಾಧಕ ವಿದ್ಯಾರ್ಥಿಗಳಾದ ಫಾತಿಮಾ ಸುಝ್ನ, ಮಾಸ್ಟರ್‌ ಮೋಕ್ಷಿತ್ ಸಿ. ಮಾರ್ಧಾಳ, ಶಯಾನ್, ಮುಹಮ್ಮದ್ ನಝೀಂ ಅವರನ್ನು ಸನ್ಮಾನಿಸಲಾಯಿತು. ಡಾ.ಫಾತಿಮಾ‌ ಸುಹಾನ ವಿಶೇಷ ಮಕ್ಕಳ ಪಾಲನೆ‌ ಮತ್ತು ಪೋಷಣೆ ಬಗ್ಗೆ ಜಾಗೃತಿ ಕಾರ್ಯಕ್ರಮ‌ ನಡೆಸಿಕೊಟ್ಟರು

ಕಾರ್ಯಕ್ರಮದಲ್ಲಿ ಸದಸ್ಯ ಬಿ.ಎಂ. ತುಂಬೆ ಸ್ವಾಗತಿಸಿದರು, ಮುಖ್ಯ ಶಿಕ್ಷಕಿ ಆಶಾಲತಾ ಶಾಲಾ ವಾರ್ಷಿಕ ವರದಿ ವಾಚಿಸಿದರು. ವಿದ್ಯಾರ್ಥಿ ಮುಹಮ್ಮದ್ ಅಲಿ ಖಿರಾತ್ ಪಠಿಸಿದರು. ಹಕೀಂ ಕಲಾಯಿ ವಂದಿಸಿ, ಅಬ್ದುಲ್ ರಝಾಕ್ ಅನಂತಾಡಿ ಕಾರ್ಯಕ್ರಮ ನಿರೂಪಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News