×
Ad

ಕುಂದಾಪುರ: ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿಯ ಮೃತದೇಹ ಪತ್ತೆ

Update: 2025-09-20 12:30 IST

ಉಡುಪಿ: ಗುರುವಾರ ಸಂಜೆ ಕಾಲೇಜಿನಿಂದ‌ ಮನೆಗೆ ಮರಳದೆ ನಾಪತ್ತೆಯಾಗಿದ್ದ ಕಾಲೇಜು ವಿದ್ಯಾರ್ಥಿಯೋರ್ವನ ಮೃತದೇಹ ಶನಿವಾರ ಬೆಳಿಗ್ಗೆ ಗಂಗೊಳ್ಳಿಯ ದಾಕುಹಿತ್ಲು ನದಿತೀರದಲ್ಲಿ ಪತ್ತೆಯಾಗಿದೆ.

ಖಾಸಗಿ ಕಾಲೇಜೊಂದರ ಪ್ರಥಮ ಪಿಯುಸಿ ವಿದ್ಯಾರ್ಥಿ, ಹೆಮ್ಮಾಡಿ ಸಂತೋಷನಗರ ನಿವಾಸಿ ಲವೇಶ್ ಪೂಜಾರಿ ಇವರ ಪುತ್ರ ನಮೇಶ್ (17) ಮೃತ ವಿದ್ಯಾರ್ಥಿ.

ಗುರುವಾರ ಸಂಜೆ ಕಾಲೇಜು ಬಿಟ್ಟ ಬಳಿಕ ನವೇಶ್ ಮನೆಗೆ ವಾಪಾಸಾಗಿರಲಿಲ್ಲ. ಇತ್ತೀಚೆಗಷ್ಟೇ ತಂದೆ ಕೊಡಿಸಿದ್ದ ಐಫೋನ್ ಮೊಬೈಲ್ ಅನ್ನು ಮನೆಯಲ್ಲಿಯೇ ಬಿಟ್ಟು ಬೈಕ್‌ನಲ್ಲಿ ತೆರಳಿದ್ದ ನಮೇಶ್ ಹೆಮ್ಮಾಡಿ ಸಮೀಪದ‌ ಕನ್ನಡಕುದ್ರು ನದಿ ತೀರದಲ್ಲಿ ಬೈಕ್ ಹಾಗೂ ತನ್ನ ಕಾಲೇಜು ಬ್ಯಾಗ್ ಅನ್ನು ಬಿಟ್ಟು ನಾಪತ್ತೆಯಾಗಿದ್ದನು.

ನಮೇಶ್ ಗಾಗಿ ತೀವ್ರ ಹುಡುಕಾಟ:

ನಮೇಶ್ ರಾತ್ರಿಯಾದರೂ‌ ಮನೆಗೆ ಬಾರದಿದ್ದುದನ್ನು‌ ಗಮಿಸಿದ ಮನೆಯವರು ಕುಂದಾಪುರ‌ ನಗರ ಠಾಣೆಯಲ್ಲಿ ದೂರು ದಾಖಲಿಸಿ ಹುಡುಕಾಟ ಆರಂಭಿಸಿದ್ದರು. ಗುರುವಾರ ಪತ್ತೆಯಾಗದ ಕಾರಣ ಶುಕ್ರವಾರವೂ ಹುಟುಕಾಟ ಮುಂದಿವರೆಸಿದ್ದು, ಅಗ್ನಿಶಾಮಕ‌ದಳ ಹಾಗೂ ಗಂಗೊಳ್ಳಿಯ ಈಜುಪಟು ದಿನೇಶ್ ಖಾರ್ವಿ ಹಾಗೂ ಸ್ಥಳೀಯರು ಕನ್ನಡಕುದ್ರು ನದಿಯಲ್ಲಿ ಸಂಜೆಯ ತನಕವೂ ಹುಟುಕಾಟ ನಡೆಸಿದ್ದರು.

ಶನಿವಾರ ಬೆಳಿಗ್ಗೆ ನಮೇಶ್‌ ಮೃತದೇಹ ಗಂಗೊಳ್ಳಿ ದಾಕುಹಿತ್ಲು ನದಿತೀರದಲ್ಲಿ ಪತ್ತೆಯಾಗಿದ್ದು, ಸಾವಿಗೆ ಸ್ಪಷ್ಟ ಕಾರಣ ಏನೆಂಬುವುದು ಪೊಲೀಸ್ ತನಿಖೆಯಿಂದಷ್ಟೇ ತಿಳಿದು ಬರಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News