×
Ad

ಪ್ರವಾದಿ ಸಂದೇಶದ ಉಪನ್ಯಾಸ ಕಾರ್ಯಕ್ರಮ

Update: 2023-11-02 21:32 IST

ಕುಂದಾಪುರ, ನ.2: ಕಂಡ್ಲೂರು ಜಮಾಅತೆ ಇಸ್ಲಾಮಿ ವತಿಯಿಂದ ಚಿಂತಕ ವಾನಂಬಾಡಿಯ ಅತೀಕುರ್ ರೆಹ್ಮಾನ್ ಅವ ರಿಂದ ಪ್ರವಾದಿ ಜೀವನ, ಸಂದೇಶ ಮತ್ತು ನಮ್ಮ ಕರ್ತವ್ಯದ ಕುರಿತು ಉಪನ್ಯಾಸ ಕಾರ್ಯಕ್ರಮ ಕಂಡ್ಲೂರು ಜಾಮಿಯಾ ಮಸ್ಜಿದ್‌ನಲ್ಲಿ ಇತ್ತೀಚೆಗೆ ನಡೆಯಿತು.

ಈ ಸಂದರ್ಭದಲ್ಲಿ ಐದು ದಶಕಗಳಿಗೂ ಅಧಿಕ ಕಾಲ ಮಸೀದಿಯಲ್ಲಿ ಖತೀಬ್ ಹಾಗೂ ಇಮಾಮರಾಗಿದ್ದ ದಿವಂಗತ ಕಾಝಿ ಅಬೂಬಕರ್ ರವರ ಧರ್ಮಪತ್ನಿ ಬೀಬಿ ಫಾತಿಮ, ಜಿ.ಉಸ್ಮಾನ್ ಸಾಹೇಬ್ ಪ್ರತಿಭಾವಂತ ವಿದ್ಯಾರ್ಥಿನಿ ಮಿಸ್ಬಾಹ್ ಬಾನು ಅವರನ್ನು ಸನ್ಮಾನಿಸಲಾಯಿತು.

ಮಸೀದಿ ಅಧ್ಯಕ್ಷ ಎಸ್.ದಸ್ತಗೀರ್, ಸ್ಥಳೀಯ ಜಮಾಅತೆ ಇಸ್ಲಾಮೀ ಸಂಚಾಲಕ ಎಸ್.ಇಮ್ತಿಯಾಝ್ ಉಪಸ್ಥಿತರಿದ್ದರು. ಮುನೀರ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News