×
Ad

ವಿಭಿನ್ನ ರೀತಿಯ ಚಲನಚಿತ್ರಗಳನ್ನು ನಿರ್ಮಿಸಿದ ಮೃಣಾಲ್‌ಸೇನ್: ಪ್ರೊ.ಫಣಿರಾಜ್

Update: 2023-09-15 20:44 IST

ಮಣಿಪಾಲ: ಖ್ಯಾತ ಚಲನಚಿತ್ರ ನಿರ್ದೇಶಕರಾದ ಮೃಣಾಲ್ ಸೇನ್, ಆರಂಭದಲ್ಲಿ ಹೆಚ್ಚೆಚ್ಚು ಸಾಮಾಜಿಕ-ರಾಜಕೀಯ ಚಿತ್ರಗಳನ್ನು ನಿರ್ಮಿಸಿದರೂ ಅನಂತರದಲ್ಲಿ ಹೆಚ್ಚು ಸಾಮಾಜಿಕ-ಸಾಂಸ್ಕೃತಿಕ ಚಲನ ಚಿತ್ರಗಳನ್ನು ನಿರ್ಮಿಸಿದರು ಎಂದು ಸಂಸ್ಕೃತಿ ವಿಮರ್ಶಕ, ಲೇಖಕ ಹಾಗೂ ಚಿಂತಕ ಪ್ರೊ.ಫಣಿರಾಜ್ ಹೇಳಿದ್ದಾರೆ.

ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಮೃಣಾಲ್‌ಸೇನ್ ಅವರ ಜನ್ಮ ಶತಮಾನೋತ್ಸವದ ಸ್ಮರಣಾರ್ಥ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರೊ.ಫಣಿರಾಜ್, ಸೇನ್ ಅವರು ಸಿನಿಮಾದಲ್ಲಿ ‘ಭೂತಕಾಲ’ದ ಬಗ್ಗೆ ಯಾವುದೇ ಪೂರ್ವಾಗ್ರಹಗಳನ್ನು ಇಟ್ಟುಕೊಳ್ಳದೆ ಸಮಕಾಲೀನ ಸಾಮಾಜಿಕ-ರಾಜಕೀಯ ವಿಷಯಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಿದ್ದರು. ನಂತರ ಅವರು ಸಾಮಾಜಿಕ- ಸಾಂಸ್ಕೃತಿಕ ವಿಷಯಗಳತ್ತಲೂ ಗಮನ ಹರಿಸಿದರು ಎಂದರು.

ಬಂಗಾಳಿ ನಿರ್ದೇಶಕರಾದ ಮೃಣಾಲ್‌ಸೇನ್ ಅವರು ಸ್ವಾತಂತ್ರ್ಯಾ ನಂತರದ ಸಾಮಾಜಿಕ ಚಳುವಳಿಗಳಲ್ಲಿ ಭಾಗಿಯಾ ಗಿದ್ದರೂ ಸಹ ಭಾರತದ ಹಿಂದಿನ ಕಾಲ ಅವರಿಗೆ ಹೊರೆಯಾಗಲಿಲ್ಲ. ಬದಲಾಗಿ ಸಮಕಾಲೀನ- ಸಾಮಾಜಿಕ- ರಾಜಕೀಯ- ಸಾಂಸ್ಕೃತಿಕ ವಿಷಯಗಳತ್ತ ಅವರ ಗಮನ ಹರಿಯಿತು. ಇದರಿಂದ ಮೃಣಾಲ್ ಸೇನ್ ಅವರು ವಿಭಿನ್ನ ರೀತಿಯ ಚಿತ್ರಗಳನ್ನು ಮಾಡಿದ್ದು, ಇವು ಭಾರತೀಯ ಚಲನಚಿತ್ರರಂಗದಲ್ಲಿ ಪರ್ಯಾಯ ನೈಜ ಚಲನಚಿತ್ರಗಳಾಗಿವೆ (ಆಲ್ಟರ್ನೇಟಿವ್ ರಿಯಲಿಸ್ಟಿಕ್ ಸಿನಿಮಾ) ಎಂದು ಅಭಿಪ್ರಾಯಪಟ್ಟರು.

ಜಿಸಿಪಿಎಎಸ್ ಮುಖ್ಯಸ್ಥ ಪ್ರೊ.ವರದೇಶ್ ಹಿರೇಗಂಗೆ ಮಾತನಾಡಿ, ಭಾರತದಲ್ಲಿ ಪರ್ಯಾಯ ಚಲನಚಿತ್ರ(ಆಲ್ಟರ್ನೇಟಿವ್ ಸಿನಿಮಾ) ಗಳನ್ನು ಅರ್ಥ ಮಾಡಿಕೊಳ್ಳಲು ಸತ್ಯಜಿತ್ ರೇ, ಮೃಣಾಲ್ ಸೇನ್ ಮತ್ತು ರಿತ್ವಿಕ್ ಘಟಕ್ ಅವರ ಅಧ್ಯಯನದ ಅಗತ್ಯವಿದೆ ಎಂದರು.

ಇದೇ ಸಂದರ್ಭದಲ್ಲಿ ‘ಖಾರೀಜ್’ ಚಲನಚಿತ್ರವನ್ನು ಪ್ರದರ್ಶಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News