×
Ad

ನಂದಳಿಕೆ: ನೀರಿನ ಟ್ಯಾಂಕ್ ಒಡೆದು ಬಿದ್ದು ಮಹಿಳೆ ಮೃತ್ಯು

Update: 2024-01-31 15:32 IST

ಕಾರ್ಕಳ : ನೀರಿನ ಟ್ಯಾಂಕ್ ಒಡೆದು ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿದ್ದು, ಅವರ ಮಗಳು ಗಂಭೀರವಾಗಿ ಗಾಯಗೊಂಡ ಘಟನೆ ಕಾರ್ಕಳ ಗ್ರಾಮಾಂತರ ಠಾಣೆ ವ್ಯಾಪ್ತಿಯ ನಂದಳಿಕೆ ಎಂಬಲ್ಲಿ ಬುಧವಾರ ನಡೆದಿದೆ

ಮೃತ ಮಹಿಳೆಯನ್ನು ಶ್ರೀಲತಾ (50) ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಮಗಳು ಪೂಜಾ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದ  ಮಹಮ್ಮಾಯಿ ದೇವಸ್ಥಾನದ ಧಾರ್ಮಿಕ ಕಾರ್ಯಕ್ರಮದಲ್ಲಿ ಊಟ ಮಾಡಿದ ಬಳಿಕ  ಕೈ ತೊಳೆಯುವ ಸಂದರ್ಭದಲ್ಲಿ ನೆಲದ ಮೇಲೆ ಇರುವ  ಹಳೆಯ ನೀರಿನ ಟ್ಯಾಂಕ್ ನೀರಿನ ಭಾರ ತಾಳಲಾರದೆ ಒಡೆದಿದ್ದು ಘಟನೆ ಸಂಭವಿಸಿದೆ.

ಒಡೆದ ರಭಸಕ್ಕೆ ನೀರು ಹಾಗೂ ಸಿಮೆಂಟ್ ಕಾಂಕ್ರೀಟ್ ಬ್ಲಾಕ್ ಹೊರಚಿಮ್ಮಿ  ಕೈ ತೊಳೆಯುತ್ತಿದ್ದ ಅವರಿಗೆ ತಾಗಿ ಮೃತಪಟ್ಟರೆ, ಮಗಳು ಪೂಜಾಗೆ ಗಂಭೀರ ಸ್ವರೂಪದ ಗಾಯಗಳಾಗಿವೆ.

ಶ್ರೀಲತಾ ಅವರು  ಬೆಳ್ಮಣ್ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷೆಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News