ಯು.ಎಫ್.ಸಿ. ಅಧ್ಯಕ್ಷರಾಗಿ ತಿಲಕ್‌ರಾಜ್ ಸಾಲಿಯಾನ್ ಆಯ್ಕೆ
ಉಡುಪಿ: ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಇದರ 2023-24ನೆ ಸಾಲಿನ ಗೌರವಾಧ್ಯಕ್ಷ ರಾಗಿ ಸಾಮಾಜಿಕ ಕಾರ್ಯಕರ್ತ ಉದ್ಯಾವರ ನಾಗೇಶ್ ಕುಮಾರ್ ಮತ್ತು ಅಧ್ಯಕ್ಷರಾಗಿ ತಿಲಕ್ ರಾಜ್ ಸಾಲಿಯಾನ್, ಪ್ರಧಾನ ಕಾರ್ಯದರ್ಶಿಯಾಗಿ ಆಬಿದ್ ಅಲಿ ಆಯ್ಕೆಗೊಂಡರು.
ಉಪಾಧ್ಯಕ್ಷರಾಗಿ ಸೋಮಶೇಖರ ಸುರತ್ಕಲ್, ಸುಗಂಧಿ ಶೇಖರ್, ಕಾರ್ಯದರ್ಶಿಯಾಗಿ ಆಶಾ ವಾಸು, ಶ್ರೀಧರ ಮಾಬಿ ಯಾನ್, ಕೋಶಾಧಿಕಾರಿ ಯಾಗಿ ಪ್ರೇಮ್ ಮಿನೇಜಸ್, ಸಾಂಸ್ಕೃತಿಕ ಕಾರ್ಯದರ್ಶಿ ಶ್ರೀಧರ ಗಣೇಶ್ ನಗರ, ಸಂಘಟನಾ ಕಾರ್ಯದರ್ಶಿಗಳಾಗಿ ಯು.ಆರ್.ಚಂದ್ರಶೇಖರ್, ಮುಹಮ್ಮದ್ ಆಲಿ, ಆಂತರಿಕ ಲೆಕ್ಕ ಪರಿಶೋಧಕರಾಗಿ ಹಬೀಬ್ ಪಳ್ಳಿ, ನಿರ್ದೇಶಕರಾಗಿ ಅಬ್ದುಲ್ ಜಲೀಲ್ ಸಾಹೇಬ್, ಮುಹಮ್ಮದ್ ನಯಾಝ್, ಜಾರ್ಜ್ ಮಿನೇಜಸ್, ಚಂದ್ರಾವತಿ ಎಸ್. ಭಂಡಾರಿ, ಯು.ಪಧ್ಮನಾಭ ಕಾಮತ್, ಶರತ್ ಕುಮಾರ್, ರಮೇಶ್ ಕುಮಾರ್ ಉದ್ಯಾವರ ಅವರನ್ನು ಆಯ್ಕೆ ಮಾಡಲಾಯಿತು.
ಮಹಾಸಭೆ ಅಧ್ಯಕ್ಷತೆಯನ್ನು ಅಧ್ಯಕ್ಷ ರಿಯಾಝ್ ಪಳ್ಳಿ ವಹಿಸಿದ್ದರು, ಪ್ರಧಾನ ಕಾರ್ಯದರ್ಶಿ ತಿಲಕ್ ರಾಜ್ ಸಾಲಿಯಾನ್ ವಾರ್ಷಿಕ ವರದಿ ಮಂಡಿಸಿದರು. ಕೋಶಾಧಿಕಾರಿ ಗಿರೀಶ್ ಗುಡ್ಡೆಯಂಗಡಿ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್, ನಿರ್ದೇಶಕರುಗಳಾದ ರಮೇಶ್ ಕುಮಾರ್ ಉದ್ಯಾವರ, ಮಾಜಿ ಅಧ್ಯಕ್ಷರುಗಳಾದ ಅನುಪ್ ಕುಮಾರ್ ಮತ್ತು ಶೇಖರ ಕೋಟ್ಯಾನ್ ಮಾತನಾಡಿದರು. ಉಪಾಧ್ಯಕ್ಷರಾದ ಸೋಮ ಶೇಖರ್ ಸುರತ್ಕಲ್ ವಂದಿಸಿದರು.