×
Ad

ಜೀವರಕ್ಷಕ ಜಯ ಬಂಗೇರ ನಿಧನ

Update: 2023-10-10 18:42 IST

ಬ್ರಹ್ಮಾವರ: ಬಾರ್ಕೂರು ಬೆಣ್ಣೆಕುದ್ರು ದೇವಸ್ಥಾನದ ಹಿಂಬದಿ ನಿವಾಸಿ ಜಯ ಬಂಗೇರ (59) ಹೃದಯಾಘಾತದಿಂದ ಅ.9ರಂದು ಸಂಜೆ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು.

ಇವರು ಮಲ್ಪೆಯಲ್ಲಿ ಮೀನುಗಾರಿಕೆ ನಡೆಸುತ್ತಿರುವಾಗ ವೇಳೆ ತೀವ್ರ ಎದೆ ನೋವು ಕಾಣಿಸಿಕೊಂಡ ಪರಿಣಾಮ ಅಸ್ವಸ್ಥ ಗೊಂಡಿದ್ದರು. ಮೃತರು ಪತ್ನಿ, ಓರ್ವ ಪುತ್ರಿ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಸ್ಥಳೀಯವಾಗಿ ನೀರಿಗೆ ಬಿದ್ದವರನ್ನು ರಕ್ಷಣೆ ಮಾಡುವ ಮೂಲಕ ಇವರು ಜೀವರಕ್ಷಕರೆಂದೇ ಗುರುತಿಸಿಕೊಂಡಿದ್ದರು. ಬಾರ್ಕೂರು ಬೆಣ್ಣೆಕುದ್ರು ಮೊಗವೀರ ಗ್ರಾಮಸಭೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಬಾರ್ಕೂರು ಕುಲಮಾಹಾಸ್ತ್ರಿ ಅಮ್ಮನವರ ದೇವಸ್ಥಾನದ ಹೊಳೆಯಾಯನದಲ್ಲಿಯೂ ದೋಣಿ ಚಲಾಯಿಸು ವುದರಲ್ಲಿ ಸಕ್ರಿಯರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News