ಕೌಶಲ್ಯಾಭಿವೃದ್ಧಿ ತರಬೇತಿ ಉದ್ಯಮಕ್ಕೆ ಪೂರಕ: ರೇಣು ಜಯರಾಮ್
ಮಣಿಪಾಲ, ಜ.16: ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ, ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿ ಆರ್‌ಓ-1 ಉಡುಪಿ ಇವರ ಸಹಯೋಗ ದೊಂದಿಗೆ ಶಿವಳ್ಳಿಯಲ್ಲಿರುವ ಬಿವಿಟಿಯಲ್ಲಿ ನಡೆದ 10 ದಿನಗಳ ವಿವಿಧ ಶೈಲಿಯ ರವಕೆಗಳು ಮತ್ತು ಸೀರೆಗೆ ಕುಚ್ಚು ಕಟ್ಟುವ ತರಬೇತಿಯ ಸಮಾರೋಪ ಸಮಾರಂಭ ಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಪವರ್ ಸಂಸ್ಥೆ ಹಾಗೂ ರೋಟರಿ ಕ್ಲಬ್‌ನ ಮಾಜಿ ಅಧ್ಯಕ್ಷೆ ರೇಣು ಜಯರಾಮ್ ಶಿಬಿರಾ ರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಯಾವುದೇ ನೂತನ ಕೌಶಲ್ಯವನ್ನು ಕಲಿತರೂ ಅದನ್ನು ಅದೇ ಉಡುಗೆಗೆ ಸೀಮಿತ ಗೊಳಿಸದೆ ವಿವಿಧ ಉಡುಗೆ ತೊಡುಗೆಗಳಿಗೆ ಹೇಗೆ ಅಳವಡಿಸಬಹುದು. ಆ ಮೂಲಕ ಅದರ ಮೌಲ್ಯವನ್ನು ಹೆಚ್ಚಿಸಬಹುದು ಎಂಬುದನ್ನು ಯೋಚಿಸಬೇಕು. ಇದರಿಂದ ಆ ವಸ್ತುಗಳಿಗೆ ಬೇಡಿಕೆ ಹೆಚ್ಚಾಗುತ್ತದೆ ಎಂದರು.
ಇದಕ್ಕಾಗಿ ಸಾಮಾಜಿಕ ಜಾಲತಾಣವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಈಗಿನ ಹೊಸ ವಿನ್ಯಾಸಗಳನ್ನು ಆಳವಡಿಸಿಕೊಳ್ಳುತ್ತಾ ಹಂತ ಹಂತವಾಗಿ ಮೇಲೆರಲು ಚಿಂತಿಸಬೇಕು ಎಂದು ರೇಣು ಶಿಬಿರಾರ್ಥಿ ಗಳಿಗೆ ಸಲಹೆಯನ್ನಿತ್ತರು.
ಇನ್ನೋರ್ವ ಅತಿಥಿ ಬಿವಿಟಿಯ ಹಿರಿಯ ಸಲಹೆಗಾರ ಜಗದೀಶ ಪೈ ಶಿಬಿರಾರ್ಥಿಗಳಿಗೆ ಉದ್ಯಮವನ್ನು ಆರಂಭಿಸಲು ಬೇಕಾದ ಯೋಜನಾ ತಯಾರಿ, ಇತರ ಸ್ವ-ಉದ್ಯೋಗ ಮಾಡಲು ಸಿಗುವ ಸೌಲಭ್ಯಗಳ ಬಗ್ಗೆ ವಿವರಿಸಿದರು.
ಗೀತಾ ಆರ್. ರಾವ್ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮೀಬಾಯಿ ಸ್ವಾಗತಿಸಿ, ವಂದಿಸಿದರು. ಶಿಬಿರದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಶಿಬಿರಾರ್ಥಿ ಗಳಿಗೂ ಪ್ರಮಾಣ ಪತ್ರವನ್ನು ವಿತರಿಸಲಾಯಿತು.