×
Ad

ಅಲ್-ಇಹ್ಸಾನ್ ಕ್ಯಾಂಪಸ್‌ನಲ್ಲಿ ಗಣರಾಜ್ಯೋತ್ಸವ ಆಚರಣೆ

Update: 2024-01-28 18:06 IST

ಕಾಪು, ಜ.28: ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್ ಮಂಗಳೂರು ಇದರ ಅಧೀನ ಸಂಸ್ಥೆಯಾದ ಮೂಳೂರು ಅಲ್-ಇಹ್ಸಾನ್ ಕ್ಯಾಂಪಸ್‌ನಲ್ಲಿ 75ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ಡಿಕೆಎಸ್‌ಸಿ ಕೇಂದ್ರ ಸಮಿತಿಯ ಅಧ್ಯಕ್ಷ ಅಸಯ್ಯದ್ ಕೆ.ಎಸ್.ಆಟಕೋಯ ತಂಳ್ ಕುಂಬೋಳ್ ಶುಕ್ರವಾರ ನೆರವೇರಿಸಿದರು.

ಡಿಕೆಎಸ್‌ಸಿ ಕೇಂದ್ರ ಸಮಿತಿಯ ಕಾರ್ಯಧ್ಯಕ್ಷ ಹಾಜಿ ಮುಹಮ್ಮದ್ ಸೀದಿ ಬಹರೈನ್ ಸಂದೇಶ ನೀಡಿದರು. ಮರ್ಕಝ್ ಸಮಿತಿ ವತಿಯಿಂದ ಡಿಕೆಎಸ್‌ಸಿ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷರಿಗೆ ಸನ್ಮಾನಿಸಲಾಯಿತು.

ಡಿಕೆಎಸ್‌ಸಿ ಯು.ಎ.ಇ ರಾಷ್ಟೀಯ ಸಮಿತಿಯ ವತಿಯಿಂದ ನಿರ್ಮಿಸಲಾಗುತ್ತಿ ರುವ ಡಿಕೆಎಸ್‌ಸಿಯ ಅಲ್-ಇಹ್ಸಾನ್ ವಿದ್ಯಾ ಕೇಂದ್ರದ ಮುಖ್ಯ ಆಡಳಿತ ಕಛೇರಿಯ ಶಂಕು ಸ್ಥಾಪನೆಯನ್ನು ತಂಳ್ ನೆರವೇರಿಸಿದರು. ಮೇ ತಿಂಗಳಲ್ಲಿ ನಡೆಯುವ ವಿದ್ಯಾರ್ಥಿಗಳ ಪದವಿ ಪ್ರಧಾನ ಸಮಾರಂಭದ ಸ್ವಾಗತ ಸಮಿತಿ ಯನ್ನು ರಚಿಸಲಾಯಿತು. ಚೇಯರ್‌ಮೆನ್ ಆಗಿ ನೇಜಾರ್ ಅಬೂಬಕ್ಕರ್ ಹಾಜಿ ಇವರನ್ನು ಆರಿಸಲಾಯಿತು.

ಸಂಸ್ಥೆಯಲ್ಲಿ 20 ವರ್ಷಗಳನ್ನು ಪೂರೈಸಿ ಕರ್ತವ್ಯ ನಿರ್ವಹಿಸುತ್ತಿರುವ ಅಬ್ದುಲ್ ಸಲಾಂ ಸಅದಿ, ಮೌಲಾನ ಇದ್ರಿಸ್ ರಝ್ವಿ, ಬಶೀರ್ ಎಂ,, ನಫೀಸಾ, ರೇಖಾ ಮತ್ತು ವಿಕ್ರಂ ಅವರನ್ನು ಸನ್ಮಾನಿಸಲಾಯಿತು. ಸಾಧಕ ಹಳೆ ವಿದ್ಯಾರ್ಥಿ ಮುಹಮ್ಮದ್ ತುಫೈಲ್, ವಿದ್ಯಾರ್ಥಿ ಮುಹಮ್ಮದ್ ರಾಫಿ ಅವರನ್ನು ಗೌರವಿಸ ಲಾಯಿತು.

ಸಂಸ್ಥೆಯ ಮ್ಯಾನೇಜರ್ ಯು.ಕೆ.ಮುಸ್ತಫಾ ಸಅದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ಹಬೀಬ್ ರಹಿಮಾನ್ ಕೆ.ಎಸ್. ಸ್ವಾಗತಿಸಿದರು. ಮರ್ಕಝ್ ಸಮಿತಿಯ ಪ್ರಧಾನ ಕಾರ್ಯದರ್ಶಿ ವೈಬಿಸಿ ಬಶೀರ್ ಅಲಿ ವಂದಿಸಿದರು. ಅಲ್-ಇಹ್ಸಾನ್ ದಅವಾ ವಿದ್ಯಾರ್ಥಿ ಮೊಹಮ್ಮದ್ ನಿಹಾದ್ ಕಾರ್ಯಕ್ರಮ ನಿರ್ವಹಿಸಿದರು.

ಮರ್ಕಝ್ ಸಮಿತಿಯ ಸದಸ್ಯರು, ಡಿಕೆಎಸ್‌ಸಿ ಕೇಂದ್ರ ಸಮಿತಿಯ ನಾಯಕರು, ಜಿಲ್ಲಾ ಸಮಿತಿ ನಾಯಕರುಗಳು, ಸ್ಥಳೀಯ ಮಸೀದಿ ಅಧ್ಯಕ್ಷರು, ಹಾಗೂ ಜಿಲ್ಲಾ ಮುಸ್ಲಿಂ ಸಂಘಟನೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News