ದಿವ್ಯಶ್ರೀ ಭಟ್‌ಗೆ ‘ರಾಗ ಧನ ಪಲ್ಲವಿ’ ಪ್ರಶಸ್ತಿ
ಉಡುಪಿ, ಜ.28: ಡಾ.ಸುಶೀಲಾ ಉಪಾಧ್ಯಾಯ ಅವರು ಹೆಸರಿನಲ್ಲಿ ಡಾ.ಯು.ಪಿ.ಉಪಾಧ್ಯಾಯ ಪ್ರಾಯೋಜಿಸಿರುವ ‘ರಾಗ ಧನ ಪಲ್ಲವಿ ಪ್ರಶಸ್ತಿ’ಗೆ ಈ ಬಾರಿ ಮಣಿಪಾಲದ ದಿವ್ಯಶ್ರೀ ಭಟ್ ಆಯ್ಕೆಯಾಗಿದ್ದಾರೆ.
ಫೆ.3ರಂದು ನಡೆಯುವ ರಾಗ ಧನ ಸಂಸ್ಥೆಯ ಶ್ರೀಪುರಂದರ ದಾಸರು ಹಾಗೂ ಸಂಗೀತ ತ್ರಿಮೂರ್ತಿ ಉತ್ಸವದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕರ್ನಾಟಕ ಸಂಗೀತದಲ್ಲಿ ವಿದ್ವತ್ ಪದವಿ ಪಡೆದಿರುವ ದಿವ್ಯಶ್ರೀ ಭಟ್, ಕೇಂದ್ರ ಸರಕಾರದ ಸಂಸ್ಕೃತಿ ಇಲಾಖೆಯ ರಾಷ್ಟ್ರೀಯ ಶಿಷ್ಯವೇತನ, ಸಂಗೀತ ಪರಿಷತ್ತಿನ ದಕ್ಷಿಣ ಭಾರತ ಮಟ್ಟದ ರಾಗಂ ತಾನಂ ಪಲ್ಲವಿ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಚೆನ್ನೈನ ಇಂಡಿಯನ್ ಫೈನ್ ಆರ್ಟ್ಸ್‌ನಿಂದ ಪುರಂದರದಾಸರ ಹಾಗೂ ಮುತ್ತಯ್ಯ ಭಾಗವತರ ಕೃತಿ ಗಾಯನದಲ್ಲಿ ಪ್ರಥಮ, ಬೆಂಗಳೂರಿನ ಗಾಯನ ಸಮಾಜದವರ ವೀಣೆ ಶೇಷಣ್ಣ ಕೃತಿ ಗಾಯನದಲ್ಲಿ ಪ್ರಥಮ ಹಾಗೂ ಇತರ ಹಲವು ಬಹುಮಾನಗಳನ್ನು ಪಡೆದಿದ್ದಾರೆ.
ಕಂಪ್ಯೂಟರ್ ಇಂಜಿನಿಯರಿಂಗ್ ಪದವೀಧರೆ ಆದ ಇವರು ಚಿತ್ರ ಕಲೆ ಹಾಗೂ ಭರತನಾಟ್ಯದಲ್ಲೂ ಪ್ರಾವೀಣ್ಯತೆ ಪಡೆದಿದ್ದಾರೆ. ಸರಿಗಮ ಭಾರತಿಯ ಗುರು ವಿದುಷಿ ಉಮಾಶಂಕರಿ ಹಾಗೂ ಪ್ರಸ್ತುತ ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯಂ ಅವರ ಶಿಷ್ಯೆ ಆಗಿರುವ ಇವರು ಎಂ.ಐ.ಟಿ. ಪ್ರೊ.ಡಾ. ಕುಮಾರ ಶ್ಯಾಮ ಹಾಗೂ ಜಯಶ್ರೀ ದಂಪತಿ ಪುತ್ರಿ.