×
Ad

ಕಿನ್ನಿಮುಲ್ಕಿಯ ಮರಣ ಗುಂಡಿ ಮುಚ್ಚುವಂತೆ ಆಗ್ರಹ

Update: 2024-01-29 19:38 IST

ಉಡುಪಿ, ಜ.29: ನಗರದ ಕಿನ್ನಿಮುಲ್ಕಿ ರಸ್ತೆ ಮಧ್ಯೆ ಸೃಷ್ಟಿಯಾಗಿರುವ ಮರಣ ಗುಂಡಿಯನ್ನು ಕೂಡಲೇ ಮುಚ್ಚುವಂತೆ ಸಾಮಾಜಿಕ ಕಾರ್ಯಕರ್ತರು ಉಡುಪಿ ನಗರಸಭೆಯನ್ನು ಒತ್ತಾಯಿಸಿದ್ದಾರೆ.

ಉಡುಪಿ ಸ್ವಾಗತ ಗೋಪುರದಿಂದ ಉಡುಪಿ ನಗರಕ್ಕೆ ಬರುವ ಮುಖ್ಯ ರಸ್ತೆಯಲ್ಲಿ ಚರಂಡಿಗೆ ಹಾಕಿರುವ ಚಪ್ಪಡಿ ಕುಸಿದು ಕೃತಕ ಹೊಂಡ ಸೃಷ್ಟಿಯಾಗಿದೆ. ಇದು ವಾಹನ ಸವಾರರಿಗೆ ಬಹಳಷ್ಟು ಸಮಸ್ಯೆ ಉಂಟು ಮಾಡುತ್ತಿದೆ. ಉಡುಪಿ ನಗರಸಭೆ ಅಥವಾ ಸಂಬಂಧ ಪಟ್ಟ ಇಲಾಖೆಯವರು ಈ ಹೊಂಡವನ್ನು ಮುಚ್ಚಿಸಿ ಮುಂದಿನ ದಿನಗಳಲ್ಲಿ ಉಂಟಾಗಬಹುದಾದ ಸಮಸ್ಯೆಗಳನ್ನು ತಡೆಗಟ್ಟಲು ಸಹಕಾರ ಮಾಡಬೇಕೆಂದು ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹಮದ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News