ಕೃತಿ ಸನಿಲ್‌ಗೆ ’ಹೊಯ್ಸಳ ಕೆಳದಿ ಚೆನ್ನಮ್ಮ’ ಪ್ರಶಸ್ತಿ ಪ್ರದಾನ
Update: 2024-01-31 18:47 IST
ಉಡುಪಿ: ಕರ್ನಾಟಕ ಸರಕಾರದ ವತಿಯಿಂದ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಅಭಿವೃದ್ಧಿ ಇಲಾಖೆ ನೀಡುವ ಹೊಯ್ಸಳ ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಉಡುಪಿ ಜಿಲ್ಲೆಯಿಂದ ಕೃತಿ ಆರ್ ಸನಿಲ್ ಆಯ್ಕೆಯಾಗಿದ್ದಾರೆ.
ಜ26ರಂದು ಉಡುಪಿ ಜಿಲ್ಲಾಡಳಿತ ವತಿಯಿಂದ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶಸ್ತಿ ಪ್ರದಾನ ಮಾಡಿದರು.
ಇವರು ಎಂಜಿಎಂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು ಉಡುಪಿಯ ರೂಪೇಶ್ ಹಾಗು ರೋಹಿಣಿ ರೂಪೇಶ್ ದಂಪತಿ ಸುಪುತ್ರಿ. ತನ್ನ ನೃತ್ಯಾಭ್ಯಾಸವನ್ನು ಬ್ರಹ್ಮಗಿರಿಯ ವಿ-ರಾಕ್ಸ್ ಡಾನ್ಸ್ ಕಂಪೆನಿಯಲ್ಲಿ ವಸಂತ್ ನಾಯ್ಕ್ ಇವರಿಂದ ಪಡೆಯುತ್ತಿದ್ದಾಳೆ.