ಸಂಗೀತಾ ಶೆಣೈಗೆ ಯಂಗ್ ಸಾಯಂಟಿಸ್ಸ್ ಪ್ರಶಸ್ತಿ ಪ್ರದಾನ
Update: 2024-01-31 19:49 IST
ಉಡುಪಿ, ಜ.31: ಮಣಿಪಾಲ ಮಾಹೆಯ ಲೈಫ್ ಸಾಯನ್ಸ್‌ನಲ್ಲಿ ಒರಲ್ ಕ್ಯಾನ್ಸರ್ ಬಗ್ಗೆ ಪಿಎಚ್‌ಡಿ ಮಾಡುತ್ತಿರುವ ಕುಂಭಾ ಸಿಯ ಯು.ಸಂಗೀತಾ ಶೆಣೈ ಯವರಿಗೆ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ನಡೆದ ರಾಷ್ಟ್ರೀಯ ಸಮ್ಮೇಳನದಲ್ಲಿ ಯಂಗ್ ಸಾಯನ್ಟಿಸ್ಟ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇಂಡಿಯನ್ ಸೊಸೈಟಿ ಆಫ್ ಹ್ಯೂಮನ್ ಜೆನೆಟಿಕ್ಸ್ ಹಾಗೂ ಗುಜರಾತ್ ಬಯೊ ಟೆಕ್ನಾಲಜಿ ರಿಸರ್ಚ್ ಸೆಂಟರ್ ಏರ್ಪಡಿಸಿದ ವಾರ್ಷಿಕ ಸಮ್ಮೇಳನದಲ್ಲಿ ಯು.ಸಂಗೀತಾ ಶೆಣೈ ತಮ್ಮ ಸಂಶೋಧನಾ ವಿಚಾರಗಳನ್ನು ಪ್ರಾತ್ಯಕ್ಷಿಕೆ ಮೂಲಕ ಮಂಡಿಸಿದ್ದರು. ಇವರು ಹಿರಿಯ ಪತ್ರಕರ್ತ ಯು.ಎಸ್ ಶೆಣೈ ಹಾಗೂ ಸಾಧನಾ ಶೆಣೈ ದಂಪತಿಯ ಪುತ್ರಿಯಾಗಿದ್ದು ಸಿಎಸ್‌ಐಆರ್ ಪುರಸ್ಕ್ರತ ಸಂಶೋಧಕಿ ಯಾಗಿದ್ದಾರೆ.