ವಿದ್ಯಾಪೋಷಕ್ ವಿದ್ಯಾರ್ಥಿ ಕುಟುಂಬಗಳಿಗೆ ಮನೆಗಳ ಹಸ್ತಾಂತರ
ಬೈಂದೂರು, ಜ.31: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ಇಬ್ಬರು ಫಲಾನುಭವಿ ವಿದ್ಯಾರ್ಥಿಗಳಿಗೆ ತೆಂಕುತಿಟ್ಟಿನ ಸ್ತ್ರೀವೇಷಧಾರಿಯಾಗಿದ್ದ ಕಡಂದೇಲು ಪುರುಷೋತ್ತಮ ಭಟ್ ಇವರ ಮಗ ಬೆಂಗಳೂರಿನ ಕೆ.ಸದಾಶಿವ ಭಟ್ ಪ್ರಾಯೋಜ ಕತ್ವದಲ್ಲಿ ನಿರ್ಮಿಸಲಾದ ಎರಡು ಮನೆಗಳ ಉದ್ಘಾಟನೆ ಮಂಗಳವಾರ ನಡೆಯಿತು.
ವಿದ್ಯಾ ಪೋಷಕ್ ಫಲಾನುಭವಿ ವಿದ್ಯಾರ್ಥಿಗಳಾದ ದ್ವಿತೀಯ ಪಿ.ಯು.ಸಿ ಕಲಿಯುತ್ತಿರುವ ಗುಜ್ಜಾಡಿಯ ಅಂಕಿತಾ ಹಾಗೂ ಪ್ರಥಮ ಪಿ.ಯು.ಸಿ ಕಲಿಯುತ್ತಿ ರುವ ಕೊಡೇರಿಯ ಶಿವರಾಜ್ ನಿರ್ಮಿಸಿ ಕೊಟ್ಟ ಮನೆಗಳನ್ನು ಪ್ರಾಯೋಜಕ ಕೆ.ಸದಾಶಿವ ಭಟ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಬೈಂದೂರಿನ ಶಾಸಕ ಗುರುರಾಜ ಗಂಟಿಹೊಳೆ ವಹಿಸಿದ್ದರು. ಶ್ಯಾಮಲಾ ಎಸ್.ಭಟ್ ಮಾತನಾಡಿದರು.
ಈ ಸಂದರ್ಭಗಳಲ್ಲಿ ದಾನಿಗಳಾದ ಯು.ವಿಶ್ವನಾಥ ಶೆಣೈ, ಯು.ಎಸ್.ರಾಜಗೋಪಾಲ ಆಚಾರ್ಯ, ಕಿಶೋರ್ ಕನ್ನರ್ಪಾಡಿ, ಸಂಸ್ಥೆಯ ಉಪಾಧ್ಯಕ್ಷರುಗಳಾದ ಎಸ್.ವಿ.ಭಟ್, ವಿ.ಜಿ.ಶೆಟ್ಟಿ, ಕೋಶಾಧಿಕಾರಿ ಕೆ.ಸದಾಶಿವ ರಾವ್, ಸದಸ್ಯರುಗಳಾದ ವಿಜಯ ಕುಮಾರ್ ಮುದ್ರಾಡಿ, ಭುವನ ಪ್ರಸಾದ್ ಹೆಗ್ಡೆ, ವಿದ್ಯಾಪ್ರಸಾದ್, ಅನಂತರಾಜ ಉಪಾಧ್ಯ, ಕೆ.ಅಜಿತ್‌ಕುಮಾರ್, ಅಶೋಕ ಎಂ., ಮರವಂತೆ ಶಾಲೆಯ ಮುಖ್ಯೋ ಪಾಧ್ಯಾಯ ಸರ್ವೋತ್ತಮ ಭಟ್, ಗ್ರಾಪಂ ಸದಸ್ಯರಾದ ಕೃಷ್ಣ, ಶೋಧನ್, ನಾರಾಯಣ ಗುಜ್ಜಾಡಿ, ಹರೀಶ್ ಮೇಸ್ತ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಎಂ.ಗಂಗಾಧರರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತ ನಾಡಿ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ನಾರಾಯಣ ಎಂ.ಹೆಗಡೆ ವಂದಿಸಿದರು. ಎಚ್.ಎನ್.ಶೃಂಗೇಶ್ವರ ಸಹಕರಿಸಿದರು. ಇವು ಸಂಸ್ಥೆಯ ವತಿಯಿಂದ ನಿರ್ಮಾಣ ಗೊಂಡ 47 ಮತ್ತು 48ನೆಯ ಮನೆಗಳಾಗಿವೆ.