×
Ad

ಸ್ಟಾರ್ಟ್‌ಅಪ್ ಸಬಲೀಕರಣ, ನವೀನ ಆವಿಷ್ಕಾರಕ್ಕಾಗಿ ಎಂಐಟಿ - ಡಿಲ್ಯಾಬ್ಸ್ ಸೀಲ್ ಪಾಲುದಾರಿಕೆ

Update: 2024-01-31 19:59 IST

ಮಣಿಪಾಲ: ಮಣಿಪಾಲ ಮಾಹೆಯ ಪ್ರತಿಷ್ಠಿತ ಘಟಕವಾಗಿರುವ ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಐಟಿ ಮತ್ತು ಹೆದರಾಬಾದಿನ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ಡಿಲ್ಯಾಬ್ಸ್ ಇನ್ಕ್ಯುಬೇಟರ್ ಅಸೋಸಿ ಯೇಶನ್ ಮಹತ್ವದ ಸಹಭಾಗಿತ್ವವನ್ನು ಘೋಷಿಸಿದ್ದು, ಸ್ಟಾರ್ಟ್‌ಅಪ್ಸ್‌ಗಳನ್ನು ತಳಮಟ್ಟದಿಂದಲೇ ಪ್ರೋತ್ಸಾಹಿಸುವ ಮತ್ತು ನವೀನ ಆವಿಷ್ಕಾರದ ಉದ್ದೇಶ ಹೊಂದಿರುವ ಈ ಒಡಂಬಡಿಕೆಯ ಪತ್ರಕ್ಕೆ ಎರಡೂ ಸಂಸ್ಥೆಗಳು ಜ.30ರಂದು ಸಹಿ ಹಾಕಿವೆ.

ಎಂಐಟಿಯ ನಿರ್ದೇಶಕ ಕಮಾಂಡರ್ ಡಾ.ಅನಿಲ್ ರಾಣಾ ಮಾತನಾಡಿ, ಈ ಒಡಂಬಡಿಕೆಯು ಎಂಐಟಿಯ ವಿದ್ಯಾರ್ಥಿಗಳಿಗೆ ಅಗತ್ಯ ಬೆಂಬಲ ಮತ್ತು ಮಾರ್ಗದರ್ಶನವನ್ನು ನೀಡುತ್ತದೆ ಮತ್ತು ವಿಶೇಷವಾಗಿ ಪ್ರಯೋಜನಕಾರಿ ಯಾಗಿದೆ. ಈ ಸಹಭಾ ಗಿತ್ವವು ಮಣಿಪಾಲದಲ್ಲಿ ಅಸ್ತಿತ್ವದಲ್ಲಿರುವ ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯನ್ನು ವರ್ಧಿಸುತ್ತದೆ. ವಿದ್ಯಾರ್ಥಿಗಳು ತಮ್ಮದೇ ಆದ ಸ್ಟಾರ್ಟ್ ಅಪ್‌ಗಳನ್ನು ಪ್ರಾರಂಭಿಸಲು ಸಹಾಯ ಮಾಡುತ್ತದೆಂದು ಅವರು ತಿಳಿಸಿದರು.

ಡಿಲ್ಯಾಬ್ಸ್ ಇನ್ಕ್ಯುಬೇಟರ್ ಅಸೋಸಿಯೇಶನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸೌಮ್ಯ ಕುಮಾರ್ ಮಾತನಾಡಿ, ಈ ಮೈತ್ರಿಯು ಭಾರತದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವಲ್ಲಿ ಬಹಳ ಮುಖ್ಯವಾದ ಹೆಜ್ಜೆಯಾಗಿದೆ. ಈ ಪಾಲುದಾರಿ ಕೆಯು ಎಂಐಟಿ ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆಯನ್ನು ಬಲಪಡಿಸುವ ಮತ್ತು ಹೊಸತನವನ್ನು ಉತ್ತೇಜಿಸುವ ಗುರಿ ಯನ್ನು ಹೊಂದಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಐಎಸ್‌ಬಿ ಸಹ ಉಪಾಧ್ಯಕ್ಷ ಸುರೇಶ ಕೆ.ಬಂಡಿ, ಮಾಹೆ) ಕುಲಸಚಿವ ಡಾ.ಪಿ.ಗಿರಿಧರ ಕಿಣಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಸಹಉಪಕುಲಪತಿ ಡಾ.ನಾರಾಯಣ ಸಭಾಹಿತ್, ಮಾಹೆಯ ಪರೀಕ್ಷಾಂಗ ಕುಲಸಚಿವ ಡಾ.ವಿನೋದ್ ವಿ.ಥಾಮಸ್, ಎಂಐಟಿಯ ಜಂಟಿ ನಿರ್ದೇಶಕ ಡಾ.ಸೋಮಶೇಖರ ಭಟ್, ಎಂಐಟಿಯ ಸಹನಿರ್ದೇಶಕ ಡಾ.ಶ್ರೀರಾಮ್ ಕೆ. ವಿ., ಡಾ.ಮುಹಮ್ಮದ್ ಜುಬೇರ್, ಡಾ.ಮನೇಶ್ ಥಾಮಸ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News