×
Ad

ಗೂಡಂಗಡಿಗೆ ನುಗ್ಗಿ ಕಳವು

Update: 2024-02-18 21:58 IST

ಉಡುಪಿ, ಫೆ.18: ಚಿಟ್ಪಾಡಿಯ ಗಜಾನನ ಹೊಟೇಲ್ ಬಳಿ ಇರುವ ಸದಾನಂದ ಎಂಬವರ ಗೂಡಂಗಡಿಗೆ ಶನಿವಾರ ರಾತ್ರಿ ನುಗ್ಗಿದ ಕಳ್ಳರು ಬಾಗಿಲಿನ ಚಿಲಕವನ್ನು ಮುರಿದು ಒಳಗಿದ್ದ ಬಿಸ್ಕೇಟ್, ಚಾಕ್ಲೇಟ್ ಬಾಕ್ಸ್, ದೇವರ ಪೂಜೆಗೆ ಬಳಸುವ ವಸ್ತು, ತಿಂಡಿ-ತಿನಿಸುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.

ಕಳವಾದ ವಸ್ತುಗಳ ಒಟ್ಟು ಮೌಲ್ಯ 16,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News