×
Ad

ಪ್ರತ್ಯೇಕ ಘಟನೆ: ಇಬ್ಬರು ಆತ್ಮಹತ್ಯೆ

Update: 2024-02-18 22:00 IST

ಬ್ರಹ್ಮಾವರ, ಫೆ.18: ಯಡ್ತಾಡಿ ಗ್ರಾಮದ ಅಲ್ತಾರು ಗುಡ್ಡಿಮನೆಯ ಮಂಜುನಾಥ (52) ಎಂಬವರು ಫೆ.9ರಿಂದ 17ರ ಬೆಳಗ್ಗೆ 11:30ರ ನಡುವಿನ ಅವಧಿಯಲ್ಲಿ ಮನೆಯ ಬಳಿ ಇರುವ ಹೆಗ್ಗುಂಜೆ ಗ್ರಾಮದ ಅಲ್ತಾರು ಗುಡ್ಡಿಮನೆ ಹಾಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ಕಳೆದ ನಾಲ್ಕು ವರ್ಷಗಳಿಂದ ಕಾಯಿಲೆಯಿಂದ ಬಳಲುತಿದ್ದು ಚಿಕಿತ್ಸೆಯಿಂದ ಗುಣಮುಖರಾಗದ ಚಿಂತೆಯಲ್ಲಿ ಕನ್ಯಾನ ಗ್ರಾಮದ ಮಂಜುನಾಥ (55) ಎಂಬವರು ಶನಿವಾ ಅಪರಾಹ್ನದ ವೇಳೆ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News