×
Ad

ದ್ವಿತೀಯ ಪಿಯು ಫಲಿತಾಂಶ | ವೈದ್ಯೆಯಾಗಿ ಜನಸೇವೆಯ ಗುರಿ: ವೈಭವಿ ಆಚಾರ್ಯ

Update: 2024-04-11 10:20 IST

ಉಡುಪಿ, ಎ.10: ಈ ಯಶಸ್ಸು ಪಡೆಯಲು ದೃಢ ಸಂಕಲ್ಪ ಮಾಡಿ ಕಠಿಣ ಪರಿಶ್ರಮ ಪಟ್ಟಿದ್ದೇನೆ. ಕಲಿಕೆಯ ಬದ್ಧತೆಯೊಂದಿಗೆ ಪಟ್ಟ ಶ್ರಮದಿಂದ ಎರಡನೇ ಸ್ಥಾನ ಪಡೆಯಲು ಸಾಧ್ಯವಾಗಿದೆ. ಇದರೊಂದಿಗೆ ಚಿಕ್ಕಂದಿನಿಂದಲೂ ತನಗಿದ್ದ ವೈದ್ಯೆಯಾಗಿ ಜನಸೇವೆ ಮಾಡುವ ಕನಸನ್ನು ನನಸು ಮಾಡಿಕೊಳ್ಳುವ ಅವಕಾಶ ಸಿಕ್ಕಿರುವುದಕ್ಕೆ ಖುಷಿಯಾಗಿದೆ ಎಂದು ವಿಜ್ಞಾನ ವಿಭಾಗದಲ್ಲಿ 597 ಅಂಕಗಳೊಂದಿಗೆ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿರುವ ವಿದ್ಯೋದಯ ಪಿಯು ಕಾಲೇಜಿನ ವಿದ್ಯಾರ್ಥಿನಿ ವೈಭವಿ ಆಚಾರ್ಯ ಹೇಳಿದರು.

ರಾಜ್ಯದ ಅಗ್ರಗಣ್ಯ ಸರಕಾರಿ ವೈದ್ಯಕೀಯ ಕಾಲೇಜೊಂದರಲ್ಲಿ ವೈದ್ಯಕೀಯ ಪದವಿ ಕಲಿತು ಜನಸಾಮಾನ್ಯರ ಸೇವೆ ಮಾಡುವುದು ನನ್ನ ಯೋಜನೆಯಾಗಿದೆ ಎಂದವರು ತಿಳಿಸಿದರು.

ಉಡುಪಿ ಸಮೀಪದ ಪುತ್ತೂರು ಸುಬ್ರಹ್ಮಣ್ಯನಗರದ ಶಂಕಪಾಲ ಆಚಾರ್ಯ ಹಾಗೂ ವಿದ್ಯಾ ಆಚಾರ್ಯ ದಂಪತಿಯ ದ್ವಿತೀಯ ಪುತ್ರಿಯಾದ ವೈಭವಿ ಆಚಾರ್ಯರ 10ನೇ ತರಗತಿವರೆಗಿನ ಪ್ರೌಢ ಶಾಲಾ ವಿದ್ಯಾಭ್ಯಾಸಗಳೆಲ್ಲ ನಡೆದುದು ಕೇಂದ್ರಾಡಳಿತ ಪ್ರದೇಶಗಳಾದ ದಾದಾ ಮತ್ತು ನಗರಹವೇಲಿಯ ಸಿಲ್ವಾಸ್ಸಾದಲ್ಲಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News