×
Ad

ಬೋಜೇಗೌಡರ ಮ್ಯಾಜಿಕ್ ಈ ಬಾರಿ ವರ್ಕೌಟ್ ಆಗಲ್ಲ: ರಮೇಶ್ ಶೆಟ್ಟಿ

Update: 2024-05-29 20:52 IST

ಉಡುಪಿ, ಮೇ 29: ಇಂದು ರಾಜ್ಯದಲ್ಲಿ ಕಾಂಗ್ರೆಸ್ ಪರ ದೊಡ್ಡ ಅಲೆ ಬೀಸುತ್ತಿದೆ. ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿರುವ ಹಾಲಿ ವಿಧಾನ ಪರಿಷತ್ ಸದಸ್ಯ ಭೋಜೇಗೌಡರನ್ನು ಈ ಬಾರಿ ಶಿಕ್ಷಕರು ತಿರಸ್ಕರಿಲಿದ್ದಾರೆ. ಕಳೆದ ಆರು ವರ್ಷಗಳಲ್ಲಿ ಯಾವುದೇ ಭರವಸೆ ಈಡೇರಿಸದೆ ಶಿಕ್ಷಕರ ಪರವಾಗಿ ಕೆಲಸ ಮಾಡದ ಇವರ ಬಗ್ಗೆ ಶಿಕ್ಷಕರು ಭ್ರಮನಿರಸರಾಗಿದ್ದಾರೆ. ಕಳೆದ ಬಾರಿ ನಡೆ ಸಿದ ಬೋಜೇಗೌಡರ ಯಾವುದೇ ಮ್ಯಾಜಿಕ್ ಈ ಬಾರಿ ವರ್ಕೌಟ್ ಆಗುವುದಿಲ್ಲ ಎಂದು ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಕೆಪಿಸಿಸಿ ಉಸ್ತುವಾರಿ ಎಂ. ರಮೇಶ್ ಶೆಟ್ಟಿ ಹೇಳಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿಕ್ಷಕರ ಕ್ಷೇತ್ರದಲ್ಲಿ 2.5ಲಕ್ಷ ಪಿಂಚಣಿ ವಂಚಿತರಿದ್ದು, ಕಾಂಗ್ರೆಸ್ ಹೊಸ ಪಿಂಚಣಿ ವ್ಯವಸ್ಥೆಯನ್ನು ಕೈಬಿಟ್ಟು ಹಳೆ ಪಿಂಚಣಿ ವ್ಯವಸ್ಥೆ ಜಾರಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಘೋಷಿ ಸಿದೆ. ಈ ಸಂಬಂಧ ಉಪಸಮಿತಿ ಕೂಡ ರಚಿಸ ಲಾಗಿದೆ. ಓಪಿಎಸ್ ನೌಕರರ ದೊಡ್ಡ ಮಟ್ಟಜದ ಬೆಂಬಲದಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಗೆಲುವು ಸಾಧಿಸಲಿದ್ದಾರೆ ಎಂದರು.

ವೈದ್ಯರಾಗಿರುವ ಡಾ.ಧನಂಜಯ ಸರ್ಜಿ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯ ರಾದರೆ ನೂರಾರು ರೋಗಿಗಳಿಗೆ ತೊಂದರೆ ಆಗಲಿದೆ. ಆದುದರಿಂದ ಅವರನ್ನು ವೈದ್ಯಕೀಯ ಕ್ಷೇತ್ರದಲ್ಲಿಯೇ ಉಳಿಸಿಕೊಂಡರೆ ಒಳಿತು. ಬಿಜೆಪಿ ಬಂಡಾಯ ಅಭ್ಯರ್ಥಿ ರಘುಪತಿ ಭಟ್ ಬಿಜೆಪಿ ವಿರುದ್ಧವೇ ಬಂಡೆದ್ದಿರುವುದು ವಿಪರ್ಯಾಸ. ಅವರಿಗೆ ಕರಾವಳಿ ಬಿಟ್ಟರೆ ಬೇರೆ ಯಾವ ಜಿಲ್ಲೆಯಲ್ಲೂ ಮತದಾರ ಬೆಂಬಲ ಇಲ್ಲ ಎಂದು ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಜಿಲ್ಲಾ ವಕ್ತಾರ ಭಾಸ್ಕರ ರಾವ್ ಕಿದಿಯೂರು, ಕರ್ನಾಟಕ ಪ್ರದೇಶ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಡಾ.ಶಾಂತವೀರ ನಾಯ್ಕ, ಶಿವಮೊಗ್ಗ ಜಿಲ್ಲಾ ಪ್ರಧಾನ ಕಾರ್ಯ ದರ್ಶಿ ಅಮೀರ್ ಹಂಝ, ಜಿಲ್ಲಾ ಸಾಮಾಜಿಕ ಜಾಲತಾಣದ ಅಧ್ಯಕ್ಷ ರೋಶನ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News