×
Ad

‘ಬಲಿಪೆ’ ತುಳು ಸಿನೆಮಾದ ಬಗ್ಗೆ ಉತ್ತಮ ಜನಾಭಿಪ್ರಾಯ: ಕತ್ತಲ್‌ಸಾರ್

Update: 2024-05-29 20:54 IST

ಉಡುಪಿ, ಮೇ 29: ಎಂಡೋ ಸಂತ್ರಸ್ತರ ನೋವು ಹಾಗೂ ತುಳುನಾಡಿನ ದೈವದೇವರ ಕಥೆಯನ್ನು ಒಳಗೊಂಡ ‘ಬಲಿಪೆ’ ತುಳು ಚಲನಚಿತ್ರ ಈಗಾಗಲೇ ತುಳುನಾಡಿನಾದ್ಯಂತ ಎಲ್ಲ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡು ಅತ್ಯುತ್ತಮ ಪ್ರದರ್ಶನ ಕಾಣುತ್ತಿದೆ. ಇದಕ್ಕೆ ಉತ್ತಮ ಜನಾಭಿಪ್ರಾಯ ಕೂಡ ವ್ಯಕ್ತವಾಗುತ್ತಿದೆ ಎಂದು ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಜಿ.ಕತ್ತಲ್‌ಸಾರ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೆಚ್ಚಿನ ಚಲನಚಿತ್ರ ಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದ್ದು, ಬುಕ್ ಮೈ ಶೋನಲ್ಲಿ 9.7 ರೇಟಿಂಗ್ ಸಿಕ್ಕಿದೆ. ಈ ಸಿನೆಮಾವನ್ನು ಉಡುಪಿ ಜನತೆ ಕೂಡ ಸ್ವಾಗತಿ ಸಿದ್ದಾರೆ. ಉಡುಪಿಯ ಒಟ್ಟು ಐದು ಚಿತ್ರಮಂದಿರಗಳಲ್ಲಿ ಈ ಸಿನೆಮಾ ಪ್ರದರ್ಶನ ಕಾಣುತ್ತಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ನಾಯಕ ನಟ ಹರ್ಷಿತ್ ಬಂಗೇರ, ನಿರ್ಮಾಪಕ ಹೇಮಂತ್ ಸುವರ್ಣ, ನಿರ್ದೇಶಕ ಪ್ರಸಾದ್ ಪೂಜಾರಿ, ಕಲಾವತಿ ದಯಾ ನಂದ್, ಡಾ.ಆಕಾಶ್‌ರಾಜ್ ಜೈನ್, ರವಿ ಪೂಜಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News