ಕರ್ಕಶ ಹಾರ್ನ್: ಖಾಸಗಿ ಬಸ್ ವಿರುದ್ಧ ಪ್ರಕರಣ ದಾಖಲು
Update: 2024-06-29 21:48 IST
ಉಡುಪಿ, ಜೂ.29: ಕರ್ಕಶ ಹಾರ್ನ್ ಅಳವಡಿಸಿದ ಖಾಸಗಿ ಬಸನ್ನು ಉಡುಪಿ ಸಂಚಾರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿರುವ ಘಟನೆ ಜೂ.28ರಂದು ಬೆಳಗ್ಗೆ ನಗರದ ಜೋಡುಕಟ್ಟೆಯ ಬಳಿ ನಡೆದಿದೆ.
ಭಾರತಿ ಖಾಸಗಿ ಬಸ್‌ನ ಚಾಲಕ ಭೋಜರಾಜ್ ಬಸ್‌ನಲ್ಲಿನ ಹಾರ್ನ್ ನಿಂದ ಕರ್ಕಶ ಶಬ್ಧವನ್ನು ಹೊರ ಹೊಮ್ಮಿಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿರುವುದಾಗಿ ಉಡುಪಿ ಸಂಚಾರ ಪೊಲೀಸ್ ಠಾಣಾ ಎಸ್ಸೈ ಸುದರ್ಶನ್ ದೊಡ್ಡಮನೆ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.