×
Ad

ಚಲಿಸುತ್ತಿದ್ದ ಬಸ್ ಮೇಲೆ ಬಿದ್ದ ಮರ: ತಪ್ಪಿದ ಭಾರೀ ಅನಾಹುತ

Update: 2024-07-25 22:34 IST

ಹೆಬ್ರಿ: ತಾಲೂಕಿನ  ಕುಚ್ಚೂರು ಗ್ರಾಮ ಪಂಚಾಯತ್ ವ್ಯಾಪ್ತಿಯ  ಬೇಳಂಜೆ  ಎಂಬಲ್ಲಿ ಭಾರೀ ಗಾಳಿ ಮಳೆಗೆ  ಚಲಿಸುತ್ತಿದ್ದ ಬಸ್ಸಿನ ಮೇಲೆ ಮರ ಬಿದ್ದು  ಬಸ್ಸಿನ ಮುಂದುಗಡೆಯ ಗಾಜು  ಸಂಪೂರ್ಣ ಹೊಡೆದು ಹೋಗಿ  ಚಾಲಕನಿಗೆ ತರಚಿದ  ಗಾಯಗಳಾಗಿವೆ. ವಿದ್ಯುತ್ ಕಂಬ ತುಂಡಾಗಿದೆ.

ಬಸ್ ಮಂದಾರ್ತಿಯಿಂದ ಹೆಬ್ರಿ ಕಡೆಗೆ ಸಾಗುತ್ತಿರುವಾಗ ಜೋರಾಗಿ ಬೀಸಿದ  ಗಾಳಿಯ ರಭಸಕ್ಕೆ ಮರ  ಬಸ್ ಮೇಲೆ ಬಿದ್ದಿದೆ. ಬಸ್ಸಿನ ಮುಂದುಗಡೆಯ ಗಾಜು, ಸೈಡ್ ಮಿರರ್ ಸೇರಿದಂತೆ ಕೆಲವೆಡೆ ಹಾನಿಯಾಗಿದೆ.

ತಪ್ಪಿದ ಬಾರಿ ಅನಾಹುತ : ಒಂದು ವೇಳೆ ಮರ ನೇರವಾಗಿ ಬಸ್ಸಿನ ಮೇಲೆ ಬಿದ್ದಿದ್ದರೆ  ಪ್ರಾಣ ಹಾನಿಯಾಗುವ  ಸಂಭವಿತ್ತು. ಮರ ವಿದ್ಯುತ್ ತಂತಿಯ ಮೇಲೆ ಬಿದ್ದು  ಬಸ್ಸಿಗೆ ಹೊಡೆದು ನೇತಾಡುತ್ತಿತ್ತು. ಬಸ್ಸಿನಲ್ಲಿ ಕೆಲವು ಜನ ಪ್ರಯಾಣಿಕರು ಮಾತ್ರ ಇದ್ದಿದ್ದರಿಂದ  ನಡೆಯಬಹುದಾದ ದೊಡ್ಡ ಅನಾಹುತ ಒಂದು ತಪ್ಪಿದೆ. ಚಾಲಕನ ಪಕ್ಕದ ಎಡಗಡೆಯ  ಸೀಟಿನಲ್ಲಿ ಕುಳಿತಿದ್ದರು ದೊಡ್ಡಮಟ್ಟದ  ಅಪಾಯ ಇದ್ದಿತ್ತು. ಯಾರು ಇರದ ಕಾರಣ  ದೊಡ್ಡ ಅನಾಹುತ ತಪ್ಪಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News