×
Ad

ಕುಂದಾಪುರ: ಗಾಳಿ ಮಳೆಗೆ ವ್ಯಾಪಕ ಹಾನಿ

Update: 2024-07-27 23:16 IST

ಕುಂದಾಪುರ: ಶುಕ್ರವಾರ ರಾತ್ರಿಯ ಗಾಳಿ - ಮಳೆಯಬ್ಬರಕ್ಕೆ ಕುಂದಾಪುರ ಹಾಗೂ ಬಂದೂರು ತಾಲೂಕಿನ ಹಲವೆಡೆಗಳಲ್ಲಿ ಮನೆಗಳಿಗೆ, ಅಡಿಕೆ ತೋಟಕ್ಕೆ ಹಾನಿಯಾಗಿದ್ದು, ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಶನಿವಾರ ಬೆಳಗ್ಗೆಯಿಂದ ಸಂಜೆಯವರೆಗೂ ಮಳೆ ಕಡಿಮೆ ಇತ್ತು.

ಕಾವ್ರಾಡಿ ಗ್ರಾಮದ ಸಾರ್ಕಲ್ ರತ್ನಾವತಿ ಶೆಡ್ತಿ, ಮುಳ್ಳುಗುಡ್ಡೆ ಕಮಲಾಕ್ಷ ಶೇಟ್, ತಲ್ಲೂರು ಗ್ರಾಮದ ಕೋಟೆಬಾಗಿಲು ಗಿರಿಜಾ, ಸೇನಾಪುರ ಗ್ರಾಮದ ಪಣಿ ಆಚಾರ್ತಿ, ತಲ್ಲೂರು ಗ್ರಾಮದ ಶ್ರೀನಿವಾಸ ಶೇರಿಗಾರ್, ಕೋಟೆಬಾಗಿಲು ಗಿರಿಜಾ, ಹೆಂಗವಳ್ಳಿ ಗ್ರಾಮದ ಮುಲ್ಲಾಣಿ ರಾಮ ನಾಯ್ಕ್, ಕೋಣಿ ಗ್ರಾಮದ ಹೆಚ್‌ಎಂಟಿ ರಸ್ತೆಯ ಬಾಬು, ರಟ್ಟಾಡಿ ಗ್ರಾಮದ ಮಂಡಾಡಿ ರಾಜು ಪೂಜಾರಿ ಮನೆ, ಹೊಸೂರು ಗ್ರಾಮದ ಗುಲಾಬಿ ಶೆಟ್ಟಿ, ಕೊರ್ಗಿಯ ರವಿ ಶೆಟ್ಟಿ, ಮೊಳಹಳ್ಳಿಯ ಗುಲಾಬಿ, ಶೀಲಾವತಿ ಶೆಡ್ತಿ, ಗುಜ್ಜಾಡಿ ಗ್ರಾಮದ ಜನತಾ ಕಾಲೋನಿಯ ನೀಲು ಖಾರ್ವಿ, ಹಟ್ಟಿಯಂಗಡಿ ಗ್ರಾಮದ ವನಜಾ, ಹಕ್ಲಾಡಿ ಗುಡ್ಡೆಯ ಪ್ರೇಮ, ಯಡಮೊಗೆಯ ಗಿರಿಜಾ ಕೊರಗ, ಆಲೂರು ಗ್ರಾಮದ ನಾಗಮ್ಮ, ಬಸ್ರೂರು ಗ್ರಾಮದ ಮೂಡ್ಕೇರಿಯ ಕಮಲ, ಸಿದ್ದಾಪುರ ಗ್ರಾಮದ ಸೀತಾ, ಪಾರ್ವತಿ ಶೆಡ್ತಿ, ಕಂದಾವರ ಗ್ರಾಮದ ಸೀತು, ಮೊಳಹಳ್ಳಿಯ ಶೀಲಾವತಿ ಶೆಡ್ತಿ, ಪಡುಕೋಣೆಯ ರಾಮ , ಬಿಜೂರಿನ ಗಂಗೆ ಮಠದ ಮನೆಗಳಿಗೆ ಮರ ಬಿದ್ದು, ಹಾನಿಯಾಗಿದೆ.

ಕೆಳಾಕೇರಿಯ ನಾಗೇಶ್ ನಾಯ್ಕ್ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ. ವಿನಾಯಕ ರಸ್ತೆಯ ಅಬ್ಬಾಸ್ ಮನೆಗೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಯಡಮೊಗೆಯ ಶ್ರೀನಿವಾಸ ಹೆಬ್ಬಾರ್ ತೋಟ, ಗಂಗೆ ಪೂಜಾರ್ತಿಯವರ ‘ತ್ತದ ಗದ್ದೆಗೆ ಅಶ್ವಥ ಮರ ಬಿದ್ದು ಹಾನಿ, ವಂಡ್ಸೆಯ ಶ್ರೀಮತಿ ಶೆಡ್ತಿ ತೋಟ, ಇಡೂರು ಕುಂಜ್ಞಾಡಿಯ ಮಹಾಬಲ ಶೆಟ್ಟಿ ತೋಟ, ರತ್ನಾಕರ ತೋಟ, ಸದಾಶಿವ ಶೆಟ್ಟಿ ತೋಟ, ಜಪ್ತಿ ಗ್ರಾಮದ ಜಗದೀಶ ಉಡುಪರ ಅಡಿಕೆ ತೋಟಗಳಿಗೆ ಹಾನಿಯಾಗಿದೆ.

ಹೆಮ್ಮಾಡಿ ಗ್ರಾಮದ ಜಾಡಿಮನೆಯ ಬುಡ್ಡು ದೇವಾಡಿಗರ ದನದ ಕೊಟ್ಟಿಗೆಗೆ ಮರ ಬಿದ್ದು, 2 ದನ ಹಾಗೂ 2 ಕರುವಿಗೆ ಗಾಯಗೊಂಡಿದೆ. ಕರ್ಕುಂಜೆ ಗ್ರಾಮದ ಅಣ್ಣಯ್ಯ ಮೊಗವೀರ ಅವರ ದನದ ಕೊಟ್ಟಿಗೆಗೆ ಹಾನಿಯಾಗಿದೆ.





Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News