ಕೆರೆಯಲ್ಲಿ ಮಹಿಳೆಯ ಮೃತದೇಹ ಪತ್ತೆ
Update: 2024-07-28 21:01 IST
ಬ್ರಹ್ಮಾವರ : ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಬೈಕಾಡಿ ಗ್ರಾಮದ ಬನ್ನಾಳದ ನಿವಾಸಿ ಸುರೇಂದ್ರ ಎಂಬವರ ಪತ್ನಿ ರೂಪಾ (57) ಎಂಬವರು ಮೃತದೇಹವು ಜು.28ರಂದು ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ.
ಇವರು ಸುಮಾರು 7 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಜು.15ರಂದು ಸಂಜೆ ಮನೆಯಿಂದ ಹೋದವರು ನಾಪತ್ತೆ ಯಾಗಿದ್ದರು. ಕೆರೆಯಲ್ಲಿ ಇವರ ಮೃತದೇಹವು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.