×
Ad

ಹಿರಿಯ ಸಾಹಿತಿಗಳಿಗೆ ‘ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ’

Update: 2024-09-27 19:14 IST

ಅಂಬ್ರಯ್ಯ, ಸತ್ಯನಾರಾಯಣ, ಉಮೇಶ್

ಉಡುಪಿ, ಸೆ.27: ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ನೀಡುವ ’ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ 2024’ಕ್ಕೆ ರಾಜ್ಯದ ಮೂವರು ಹಿರಿಯ ಸಾಹಿತಿಗಳು ಆಯ್ಕೆ ಯಾಗಿದ್ದಾರೆ.

ಶಿವಮೊಗ್ಗದ ಅಂಬ್ರಯ್ಯ ಮಠ(ಇತಿಹಾಸ ಸಂಶೋಧನೆ), ಚಿಕ್ಕಮಂಗಳೂರಿನ ಎಚ್.ಎಸ್.ಸತ್ಯನಾರಾಯಣ(ವಿಮರ್ಶೆ), ಕುಂದಾಪುರದ ಡಾ.ಉಮೇಶ್ ಪುತ್ರನ್(ವೈದ್ಯ ಸಾಹಿತ್ಯ) ಅವರಿಗೆ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ನ.1ರಂದು ನಡೆಯುವ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕದೊಂದಿಗೆ ’ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ 2024’ ಪ್ರದಾನ ಮಾಡಲಾಗುವುದು ಎಂದು ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ ಸಮಿತಿಯ ಸಂಚಾಲಕಿ ಉಡುಪಿ ಸಂಧ್ಯಾ ಶೆಣೈ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News