ಡಿಕೆಎಸ್‌ಸಿ ಕುವೈತ್ ಅಧ್ಯಕ್ಷರಾಗಿ ಯೂಸುಫ್ ಅಬ್ಬಾಸ್ ಪುನರಾಯ್ಕೆ
ಉಡುಪಿ, ಜ.20: ಡಿಕೆಎಸ್‌ಸಿ ಇದರ ಕುವೈತ್ ರಾಷ್ಟ್ರೀಯ ಸಮಿತಿಯ ವಾರ್ಷಿಕ ಮಹಾಸಭೆಯು ರಾಷ್ಟ್ರೀಯ ಸಮಿತಿ ಅಧ್ಯಕ್ಷ ಯೂಸುಫ್ ಅಬ್ಬಾಸ್ ಬಾರೂದ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಕುವೈತ್ ಸಾಲ್ಮಿಯ ಸುನ್ನಿ ಸೆಂಟರ್‌ನಲ್ಲಿ ನಡೆಯಿತು.
ಗೌರವಾಧ್ಯಕ್ಷ ಶಫೀಕ್ ಅಹ್ಸನಿ ದುವಾ ನೆರವೇರಿಸಿದರು. ಸಭೆಯನ್ನು ಡಿಕೆಎಸ್‌ಸಿ ಕೇಂದ್ರ ಸಮಿತಿ ವೀಕ್ಷಕರಾಗಿ ಆಗಮಿಸಿದ್ದ ಡಿಕೆಎಸ್‌ಸಿ ವಿಷನ್ ’30 ಇದರ ಚೇರ್ಮನ್ ಹಾತಿಂ ಹಾಜಿ ಕೂಳೂರು ಉದ್ಘಾಟಿಸಿದರು. ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಲಾಯಿತು.
ಡಿಕೆಎಸ್‌ಸಿ ಕುವೈತ್ ರಾಯಭಾರಿ ಅಝೀಝ್ ಮೂಳೂರು ನೇತೃತ್ವದಲ್ಲಿ ಹೊಸ ಸಮಿತಿಯನ್ನು ಆರಿಸಲಾಯಿತು. ಯೂಸುಫ್ ಅಬ್ಬಾಸ್ ಬಾರುದ್ ಅವರನ್ನು ಅಧ್ಯಕ್ಷರಾಗಿ ಪುನಾರಾಯ್ಕೆ ಮಾಡಲಾಯಿತು. ಪ್ರಧಾನ ಕಾರ್ಯ ದರ್ಶಿಯಾಗಿ ಲಿಯಾಕತ್ ಗಂಗಾವಳಿ, ಕೋಶಾಧಿಕಾರಿಯಾಗಿ ಇಂತಿಯಾಝ್ ಸೂರಿಂಜೆ ಅವರನ್ನು ಆಯ್ಕೆ ಮಾಡಲಾಯಿತು. 15 ಮಂದಿ ಕಾರ್ಯಕಾರಿ ಸಮಿತಿಯನ್ನು ಒಳಗೊಂಡ ನೂತನ ಸಮಿತಿಯನ್ನು ರಚಿಸಲಾಯಿತು.
ಅಬ್ದುರ‌್ರಹ್ಮಾನ್ ಸಖಾಫಿ ದುಆ ನೆರವೇರಿಸಿದರು. ಶಫೀಕ್ ಅಹ್ಸನಿ ಸ್ವಾಗತಿಸಿ ಲಿಯಾಕತ್ ಗಂಗಾವಳಿ ವಂದಿಸಿದರು. ಹೈದರ್ ಉಚ್ಚಿಲ ಕಾರ್ಯಕ್ರಮ ನಿರೂಪಿಸಿದರು.