ವಿಷದ ಹಾವು ಕಡಿತ: ಮಹಿಳೆ ಮೃತ್ಯು
Update: 2025-01-27 22:04 IST
ಬ್ರಹ್ಮಾವರ, ಜ.27: ವಿಷದ ಹಾವು ಕಚ್ಚಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕೊಕ್ಕರ್ಣೆ ಪಂಚಾಯತ್ ಬಳಿ ನಡೆದಿದೆ.
ಮೃತರನ್ನು ಸ್ಥಳೀಯ ನಿವಾಸಿ ಲಕ್ಕಮ್ಮ ಬಾಯಿ(81) ಎಂದು ಗುರುತಿಸಲಾಗಿದೆ. ಇವರು ಜ.14ರಂದು ಮನೆಯ ಸಮೀಪ ವಿರುವ ಗದ್ದೆಯಲ್ಲಿ ತರಕಾರಿ ಗಿಡಗಳ ಮಧ್ಯೆ ಇರುವ ಕಳೆಯನ್ನು ಕೀಳುತ್ತಿರುವಾಗ ಕಾಲಿನ ಪಾದದ ಬಳಿ ನಾಗರಹಾವು ಕಚ್ಚಿತ್ತೆನ್ನಲಾಗಿದೆ.
ಇದರಿಂದ ತೀವ್ರವಾಗಿ ಅಸ್ವಸ್ಥಗೊಂಡ ಅವರು, ಜ.27ರಂದು ನಸುಕಿನ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಬ್ರಹ್ಮಾವರ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.