ಹಿರಿಯ ಕಾಂಗ್ರೆಸಿಗ ರಮೇಶ್ ಪೂಜಾರಿ ನಿಧನ
Update: 2025-02-01 19:55 IST
ಉಡುಪಿ: ಹಿರಿಯ ಕಾಂಗ್ರೆಸಿಗ, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾಜಿ ಅಧ್ಯಕ್ಷ, ಶ್ರೀಬ್ರಹ್ಮಬೈದರ್ಕಳ ಪಂಚ ಧೂಮಾವತೀ ಗರೋಡಿ ತೋನ್ಸೆ ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ, ತೋನ್ಸೆ ಗರಡಿಯ ಗುರಿಕಾರರು, ಆಡಳಿತ ಸಮಿತಿಯ ಮಾಜಿ ಅಧ್ಯಕ್ಷರು ಆದ ಬಿ. ಪಿ. ರಮೇಶ್ ಪೂಜಾರಿ (74) ಶುಕ್ರವಾರ ರಾತ್ರಿ ತೀವ್ರ ಹೃದಯಾಘಾತ ದಿಂದ ನಿಧನರಾದರು.
ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅವರು ಅಗಲಿದ್ದಾರೆ.