×
Ad

ಯೋಗದಿಂದ ದೈಹಿಕ, ಮಾನಸಿಕ ಸ್ವಾಸ್ಥ್ಯ: ಪುತ್ತಿಗೆ ಶ್ರೀ

Update: 2025-02-04 21:50 IST

ಉಡುಪಿ: ಯೋಗದಿಂದ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯ ಸಾಧ್ಯ ಎಂದು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀಸುಗುಣೇಂದ್ರತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಪರ್ಯಾಯ ಪುತ್ತಿಗೆ ಶ್ರೀಕೃಷ್ಣಮಠ ಆಶ್ರಯದಲ್ಲಿ ಪತಂಜಲಿ ಯೋಗ ಸಮಿತಿ, ವಿವೇಕಾನಂದ ಯೋಗ ವಿಜ್ಞಾನ ಕೇಂದ್ರ ಹಾಗೂ ಶ್ರೀಕೃಷ್ಣ ಯೋಗ ಕೇಂದ್ರ ಬ್ರಹ್ಮಗಿರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ರಥಸಪ್ತಮಿ ಅಂಗವಾಗಿ ಮಂಗಳವಾರ ರಾಜಾಂಗಣದಲ್ಲಿ ಆಯೋಜಿಸಲಾದ ಸಾಮೂಹಿಕ ಸೂರ್ಯ ನಮಸ್ಕಾರ ಹಾಗೂ ಯೋಗ ಶಿಕ್ಷಣ ಶಿಬಿರವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಒತ್ತಡದ ಬದುಕಿನ ಜಂಜಾಟಗಳನ್ನು ಕಡಿಮೆ ಮಾಡಲು ಯೋಗ ಪೂರಕ. ಅದನ್ನು ಶ್ರೀಕೃಷ್ಣನೂ ಗೀತೆಯಲ್ಲಿ ಸಾರಿದ್ದಾನೆ. ನಿತ್ಯವೂ ನಿಯಮಿತವಾಗಿ ಯೋಗಾಭ್ಯಾಸ ಮಾಡುವುದರಿಂದ ಉತ್ತಮ ಆರೋಗ್ಯ ಸಾಧ್ಯ ಎಂದು ಅವರು ತಿಳಿಸಿದರು.

ಪರ್ಯಾಯ ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಉದ್ಯಮಿ ಬಾಲಾಜಿ ರಾಘವೇಂದ್ರ ಆಚಾರ್ಯ, ಬ್ರಹ್ಮಗಿರಿ ಶ್ರೀಕೃಷ್ಣ ಯೋಗ ಕೇಂದ್ರದ ಅಧ್ಯಕ್ಷ ಅಮಿತ್ ಶೆಟ್ಟಿ, ಪತಂಜಲಿ ಯೋಗ ಸಮಿತಿ ಅಧ್ಯಕ್ಷ ರಾಘವೇಂದ್ರ ಭಟ್, ವಿವೇಕಾನಂದ ಯೋಗ ವಿಜ್ಞಾನ ಕೇಂದ್ರದ ಪಿ.ವಿ.ಭಟ್, ಕ್ರೀಡಾ ಭಾರತಿ ಯೋಗ ಸಮಿತಿಯ ವಿದ್ಯಾ ಸನಿಲ್, ಪತಂಜಲಿ ಯೋಗ ಸಮಿತಿಯ ಸರೋಜ ಮತ್ತು ಭವಾನಿ, ನಗರ ಸಂಯೋಜಕ ರಮೇಶ ಶೇರಿಗಾರ್, ರಾಜ್ಯ ಸಂಯೋಜಕ ಶೇಖರ ಶೆಟ್ಟಿ ಮತ್ತು ಮಹಿಳಾ ಸಮಿತಿಯ ಲಲಿತಾ ಕೆದ್ಲಾಯ ಉಪಸ್ಥಿತರಿದ್ದರು.

ನಗರ ಪ್ರಶಿಕ್ಷಣ ಚಿಂತನಕೂಟ ಪ್ರಮುಖರಾದ ಪ್ರೇಮ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಮೂಹಿಕ ಸೂರ್ಯ ನಮಸ್ಕಾರ, ವಿವಿಧ ಯೋಗಾಸನಗಳನ್ನು ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News